Header Ads
Breaking News

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ ಏ.24ರಿಂದ 30ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮುಂಬರುವ ಎಪ್ರಿಲ್ 24 ರಿಂದ 30 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತವು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ ರಾಮ ಕೃಷ್ಣ ಭಟ್ ರವರು ಚಪ್ಪರ ಮೂಹೂರ್ತ ಪೂಜೆಯನ್ನು ನೆರವೇರಿಸಿದರು.

ಮಠದಬೆಟ್ಟು ಶ್ರೀ ನಾಗೇಶ ಶರ್ಮಾ ರವರು ದೀಪ ಪ್ರಜ್ವಲಿಸುವ ಮೂಲಕ ಚಪ್ಪರ ಮೂಹೂರ್ತ ವನ್ನು ನೆರೆವೇರಿಸಲಿದರು, ಬಿಳಿಯೂರು ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ರೋಹಿತಾಕ್ಷ ಬಾನಬೆಟ್ಟು, ಪ್ರಭಾಕರ ಶೆಟ್ಟಿ ಏಳ್ನಾಡುಗತ್ತು ಉದ್ಯಮಿಗಳು ಮುಂಬಯಿ, ರಾಮಕೃಷ್ಣ ಭಟ್ ಆರ್.ಕೆ ಎರೆಂಜರ್ಸ್ ಮೂಡಬಿದ್ರಿ ಇವರುಗಳು ಗೌರವ ಉಪಸ್ಥಿತರಾಗಿದ್ದರು. ಚಪ್ಪರ ಸಮಿತಿಯ ಸಂಚಾಲಕರಾದ ಸದಾಶಿವ ಸಾಮಾನಿ, ಸಮಿತಿಯ ಸಹಸಂಚಾಲಕರು ಮತ್ತು ಸದಸ್ಯರುಗಳ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು, ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು, ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ವಿವಿಧ ಪದಾಧಿಕಾರಿಗಳು, ಸದಸ್ಯರುಗಳು, ಬ್ರಹ್ಮಕಲಶೋತ್ಸವದ ವಿವಿಧ ಉಪಸಮಿತಿಗಳ ಸಂಚಾಲಕರು,ಸಹಸಂಚಾಲಕರು, ಸದಸ್ಯರುಗಳು ಮತ್ತು ಗ್ರಾಮದ ಶ್ರಿದೇವರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *