Header Ads
Breaking News

ಮಡಂತ್ಯಾರಿನ ಪೊಂಪೈ ಆರ್ಕೆಡ್‌ನಲ್ಲಿ ಶ್ರೀ ದುರ್ಗಾ ಟೆಕ್ಸ್‌ಟೈಲ್ ನ ನೂತನ ಮಳಿಗೆ ಉದ್ಘಾಟನೆ

ಬಂಟ್ವಾಳ: ಉಜಿರೆ, ಬೆಳ್ತಂಗಡಿ, ಬಂಟ್ವಾಳದಲ್ಲಿ ತನ್ನ ಶಾಖೆಯನ್ನು ಹೊಂದಿರುವ ಹೆಸರಾಂತ ಜವಳಿ ಮಳಿಗೆ ಶ್ರೀ ದುರ್ಗಾ ಟೆಕ್ಸ್‌ಟೈಲ್ ಮತ್ತು ರೆಡಿಮೇಡ್ಸ್‌ನ 4ನೇ ನೂತನ ಮಳಿಗೆ ಮಡಂತ್ಯಾರಿನ ಮುಖ್ಯರಸ್ತೆಯಲ್ಲಿರುವ ಪೊಂಪೈ ಆರ್ಕೆಡ್‌ನಲ್ಲಿ ಶುಭಾರಂಭಗೊಂಡಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ದೀಪ ಪ್ರಜ್ವಲನೆಗಳಿಸಿದರು. ಮಡಂತ್ಯಾರಿನ ಸೆಕ್ರೇಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆ.ಫಾ. ಬಾಸಿಲ್ ವಾಸ್ ನೂತನ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸಮರ್ಥ್‌ಲಾಲ್ ದುಖ್, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ತಾನದ ಆಡಳಿತ ಮೋಕ್ತೇಸರ ಬಿ.ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ದ.ಕ. ಮತ್ತು ಉಡುಪಿ ಜಿಲ್ಲಾ ಜಮಿಯತುಲ್ ಫಲಾಹ್‌ನ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಲತೀಫ್ ಸಾಹೇಬ್, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬೇಬಿ ಸುವರ್ಣ, ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಾಗವಹಿಸಿದ್ದರು. 

ಈ ಸಂದರ್ಭ ಸಂಸ್ಥೆಯ ಆಡಳಿತ ಪಾಲುದಾರ ಮೋಹನ್ ಚೌಧರಿ ಮಾತನಾಡಿ ಮೂರು ವರ್ಷಗಳ ಹಿಂದೆ ಉಜಿರೆಯಲ್ಲಿ ವಸ್ತ್ರ ಮಳಿಗೆ ಆರಂಭಿಸುವಾಗ ತುಂಬಾ ಅಂಜಿಕೆಯಿತ್ತು. ಆದರೆ ಕೆಲವೇ ಅವಧಿಯಲ್ಲಿ ಜನರ ಪ್ರೋತ್ಸಾಹದಿಂದ ಯಶಸ್ವಿಯಾಗಿ ಉದ್ಯಮ ನಡೆಸಲು ಸಾಧ್ಯವಾಯಿತು. ಮಡಂತ್ಯಾರಿನಲ್ಲೂ ಹೊಸ ಮಳಿಗೆ ಆರಂಭಿಸುವಂತೆ ಅನೇಕ ಮಂದಿ ಸ್ನೇಹಿತರು ಒತ್ತಾಯಿಸಿದ್ದರು ಮೂರು ವರ್ಷದ ಪ್ರಯತ್ನದ ಫಲವಾಗಿ ಮಡಂತ್ಯಾರಿನಲ್ಲೂ ಹೊಸ ಮಳಿಗೆ ಸ್ಥಾಪಿಸಲು ಸಾಧ್ಯವಾಯಿತು ಎಂದರು. ಗ್ರಾಹಕರು, ಹಿತೈಷಿಗಳು ನೂತನ ಮಳಿಗೆಗೆ ಆಗಮಿಸಿ ಶುಭ ಹಾರೈಸಿದರು.

Related posts

Leave a Reply