Header Ads
Breaking News

ಮಣಿಪಾಲದಲ್ಲಿ ’ರಾಯಲ್ ಎಂಬೆಸಿ’ ವಸತಿ ಸಮುಚ್ಚಯ ಉದ್ಘಾಟನೆ

 ಮಲ್ಪೆ ಮಣಿಪಾಲ ಬಿಲ್ಡರ್ಸ್ ಮಾಲಕತ್ವದಲ್ಲಿ ಮಣಿಪಾಲದ ಎಂಡ್ ಪಾಯಿಂಟ್ ರೋಡ್ ಬಳಿ ನಿರ್ಮಾಣಗೊಂಡಿರುವ ೩೦ ಮಹಡಿ ವಸತಿ ಸಮುಚ್ಚಯ ರಾಯಲ್ ಎಂಬಸಿ ಉದ್ಘಾಟನೆಗೊಂಡಿದೆ.

ಜಿಲ್ಲೆಯ ಅತೀ ದೊಡ್ಡ ಹಾಗೂ ಎತ್ತರದ ವಸತಿ ಸಮುಚ್ಚಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಣಿಪಾಲದ ರಾಯಲ್ ಎಂಬಸಿ ವಸತಿ ಸಮುಚ್ಚಯವನ್ನು ಮಾಹೆಯ ಸಹಕುಲಾಧಿಪತಿ ಎಚ್.ಎಸ್ ಬಲ್ಲಾಳ್ ಗಿಡಕ್ಕೆ ನೀರು ಹಾಕುವ ಮೂಲಕ ಹಾಗೂ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನೆರೆದ ಗಣ್ಯರು ದೀಪ ಬೆಳಗುವುದರ ವಸತಿ ಸಮುಚ್ಚಯಕ್ಕೆ ಅದಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್, ಮಣಿಪಾಲದ ಪರಿಸರಕ್ಕೆ ಹೇಳಿ ಮಾಡಿಸಿದಂತಿದೆ ರಾಯಲ್ ಎಂಬಸಿ ವಸತಿ ಸಮುಉಚ್ಚಯ.ಈಗಾಗಲೇ ಮಾಹೆ 76 ಪ್ಲ್ಯಾಟ್ ಗಳನ್ನು ಮಾಹೆಯ ಸಹದ್ಯೋಗಿಗಳ ಉಪಯೋಗಕ್ಕಾಗಿ ಖರೀದಿಸಿದೆ. ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿರುವ ಅತ್ಯುತ್ತಮ ವಸತಿ ಸಮುಚ್ಚಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

3.5 ಎಕರೆ ಜಾಗದಲ್ಲಿ ನಿರ್ಮಾಣಗೊಂಡ ರಾಯಲ್ ಎಂಬಸಿ ನಗರದ ಅತೀ ಎತ್ತರದ ವಸತಿ ಸಮುಚ್ಚಯ ಎನ್ನುವ ಹೆಗ್ಗಲಿಕೆಗೆ ಕಾರಣವಾಗಿದೆ.ನಾಲ್ಕು ಕಟ್ಟದಗಳು ಪ್ರತ್ಯೇಕವಾಗಿದ್ದರೂ ಒಂದಕ್ಕೊಂದು ಹೊಂದಿಕೊಂಡಿರುವುದು ಇದರ ವೈಶಿಷ್ಯವಾಗಿದೆ. ಹೈ ಸ್ಪೀಡ್ ಲಿಫ್ಟ್ ವ್ಯವಸ್ಥೆ ಸೇರಿದಂತೆ ಸ್ಟೇರ್ ಕೇಸ್ ಸಹ ನಿರ್ಮಿಸಲಾಗಿದೆ.ಒಟ್ಟು 45- ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾದ ಅತೀ ದೊಡ್ಡ ಕಾರ್ ಪಾಕಿಂಗ್ ಸ್ಥಳವಿದೆ. ಇದರ ಜೊತೆಗೆ ಸ್ವಿಮ್ಮಿಂಗ್ ಪೂಲ್, ಮಕ್ಕಳು ಆಡುವ ಗೇಮ್ ಸೆಂಟರ್, ಜಿಮ್,ಪಾರ್ಕ್, ಸನ್ ಸೆಟ್ ಪಾಯಿಂಟ್ ಕೂಡಾ ನಿರ್ಮಿಸಲಾಗಿದ್ದು ಎಲ್ಲಾ ಸುರಕ್ಷತಾ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ.ಪರಿಸರದಲ್ಲಿ ಸಿಸ್ ಕ್ಯಾಮರಾ ಹಾಕಲಾಗಿದ್ದು ಭವ್ಯವಾದ ಸಂದರ್ಶಕರ ಕೊಠಡಿ, ಮಕ್ಕಳಿಗೆ ಪ್ರತ್ಯೇಕ ಪ್ಲೇ ಏರಿಯಾ, ಕ್ಲಬ್ ಹೌಸ್ ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ. ಕಟ್ಟಡ ನಿರ್ಮಾಣದ ಜವಾಭ್ಧಾರಿಯನ್ನು ಸಿಸಿಸಿಎಲ್ ಸಂಸ್ಥೆಗೆ ನೀಡಲಾಗಿದ್ದು , ಉಡುಪಿ-ಬೆಂಗಳೂರು ಸೈಮನ್ ಹಾಗೂ ಅಸೋಸಿಯೇಶನ್ ಪ್ರಾಜೆಕ್ಟ್ ರೂಪಿಸಿದ್ದು ಮುಂಬಯಿಯ ಶಾಂಘವಿ ಹಾಗೂ ಅಸೋಸಿಯೇಶನ್ ಕಟ್ಟಡದ ವಿನ್ಯಾಸ ರೂಪಿಸಿದೆ. ಪ್ಲಂಬಿಂಗ್ ಹಾಗೂ ಪ್ರೈರ್ ಫೈಟಿಂಗ್ ಡಿಸೈನ್ ಬೆಂಗಳೂರಿನ ಸಿ.ಎಸ್.ಸಿ ಸಂಸ್ಥೆ ಪೂರ್ಣಗೊಳಿಸಿದೆ. ಭೂಕಂಪ ಆದರೂ ಕಟ್ಟಡಕ್ಕೆ ಹಾನಿಯಾದ ರೀತಿಯಲ್ಲಿ ಎಲ್ಲಾ ಸುರಕ್ಷಾ ಕ್ರಮವನ್ನು ಕೈಗೊಳ್ಳಲಾಗೊಇದೆ ಅಂತ ಮಣಿಪಾಲ-ಮಲೆ ಬಿಲ್ಡರ್ಸ್‌ನ ಚೇರ್ ಮೇನ್ ಪ್ರಮೊದ್ ಮದ್ವರಾಜ್ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *