Header Ads
Header Ads
Breaking News

ಮಣಿಪಾಲದಲ್ಲಿ ವಿಶ್ವದರ್ಜೆ ಮಟ್ಟದ ಸಂಶೋಧನಾ ಕಲಿಕಾ ಕೇಂದ್ರ

ಸೋಲಾರ್ ಶಕ್ತಿಗಳನ್ನು ಬಳಸಬಹುದಾದ ಇತರ ಕ್ಷೇತ್ರಗಳ ಸಂಶೋಧನೆ ಮತ್ತು ತರಭೇತಿಗಾಗಿ ಜಾಗತಿಕ ಮಟ್ಟದ ಕೇಂದ್ರವನ್ನು ಮಣಿಪಾಲದಲ್ಲಿ ಆರಂಭಿಸುವ ಒಪ್ಪಂದಕ್ಕೆ ಸೆಲ್ಕೋ ಪೌಂಡೇಶನ್ ಮತ್ತು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಹಿ ಮಾಡಿಕೊಂಡಿವೆ.ಈ ಸಂದರ್ಬದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸೆಲ್ಕೋ ಪೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮ್ಯಾಗ್ಸಸೆ ಪುರಸ್ಕೃತರಾದ ಡಾ. ಹರಿಶ್ ಹಂದೆ ನಮ್ಮ ದೇಡಸಲ್ಲಿ ದುಡಿಯುವುದಕ್ಕೆ ಸಿದ್ದವಾಗಿರುವ ಕೈಗಗಳಿಗೆ ಉದ್ಯೋಗ ನೀಡದೇ ಸುಸ್ಥಿರ ಅಭಿವೃದ್ದಿ ಅಸಾದ್ಯಆದರೆ ಈ ಕೇಂದ್ರದಲ್ಲಿ ಬೇರೆಯವರ ಕೈಕೆಳಗೆ ಕೆಲಸ ಮಾಡುವ ಉದ್ಯೋಗಿಗಳನ್ನು ಸೃಷ್ಟಿಸಿವುದು ಉದ್ದೆಶವಲ್ಲ ಸಮಾಜದ ಸಮಸ್ಯೆಗಳಿಗೆ ತಾವೇ ಸಂಸೋಧನೆ ನಡೆಸಿ ಪರಿಹಾರವನ್ನು ಕಂಡುಕೊಳ್ಳುವ ಮತ್ತು ಅವುಗಳನ್ನು ಅನುಷ್ಟಾನಗೊಳಿಸುವಂತೆ ಮಾಡುವುದು ಉದ್ದೆಶವಾಗಿದೆ ಎಂದರು. ಈಗಾಗಲೇ ವಿವಿಧ ದೇಶಗಳಿಂದ ಈ ಕೇಂದ್ರದಲ್ಲಿ ಸಂಶೋಧನೆಗೆ 150ಕ್ಕೂ ಹೆಚ್ಚು ವಿಷಗಳ ಬಗ್ಗೆ ಅರ್ಜಿಗಳು ಬಂದಿವೆ. ಇಂಗ್ಲೆಂಡಿನ ಆಕ್ಸ್ ಫರ್ಡ್, ಅಮೇರಿಕಾ ಮೆಸೆಚುಸೆಟ್ಸ್ ಇನ್ಸ್ ಟ್ಯುಟ್ ಆಫ್ ಟೆಕ್ನಾಲಜಿಯಿಂದ ಹತ್ತಾರು ಮಂದಿ ಪಿ.ಎಚ್.ಡಿ ಸಂಶೋಧನೆಗೆ ಇಲ್ಲಿ ಬರುವುದಕ್ಕೆ ಆಸಕ್ತಿ ವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

 

Related posts

Leave a Reply