Header Ads
Breaking News

ಮಣಿಪಾಲ:ಮಾರ್ಚ್ 9ರಿಂದ 11ರ ವರೆಗೆ ತ್ರಿವರ್ಣ ಕಲಾಕೇಂದ್ರದ ವತಿಯಿಂದ ಚಿತ್ರಕಲಾ ಪ್ರದರ್ಶನ

ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಯರ ಸಹಭಾಗಿತ್ವದಲ್ಲಿ ಮಾರ್ಚ್ 9ರಿಂದ 11ರ ವರೆಗೆ ಕಲಾಪ್ರದರ್ಶನ ನಡೆಯಲಿದ್ದು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ರಚಿತವಾದ ಹಳ್ಳಿ ಜೀವನಕ್ಕೆ ಸಂಬಂಧಿಸಿದ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಮಾರ್ಗದರ್ಶಕರಾದ ಹರೀಶ್ ಸಾಗ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು 24ವಿದ್ಯಾರ್ಥಿಗಳು ತಮ್ಮ ಕಲ್ಪನೆ ಮತ್ತು ಅನುಭವಗಳನ್ನು ಸಂಯೋಜಿಸಿ 24 ಕಲಾಕೃತಿಗಳನ್ನು ರಚಿಸಿದ್ದು ಅದರಲ್ಲಿ 18ಅಕ್ರಾಲಿಕ್ ಕ್ಯಾನ್ವಾಸ್ ಮತ್ತು 6 ಛಾರ್ಕೋಲ್ ಪೇಪರ್ ಮಾದ್ಯಮದಲ್ಲಿ ರಚಿಸಲ್ಪಟ್ಟ ಕಲಾಕ್ರತಿಗಳು ಹಳ್ಳಿ ಸೊಗಡು ಶ್ರದ್ದಾಭಕ್ತಿ ವೃತ್ತಿ ದಿನಚರಿ ಬಾಲ್ಯದ ಮೋಜಿನ ಆಟ ಇನ್ನಿತರ ಹಳ್ಳಿ ಜೀವನದ ಹಿನ್ನಲೆಯನ್ನು ಸಾರುವ ಕಲಾಕೃತಿಗಳು ಪ್ರದರ್ಶಿಸಲ್ಪಡಲಿವೆ.
ಮಾರ್ಚ್ 8 ರಂದು ಬೆಳಿಗ್ಗೆ ಸರಿಯಾಗಿ 9.45 ಕ್ಕೆ ಮಣಿಪಾಲದ ಗೀತಾಮಂದಿರದಲ್ಲಿ ಅಂಬಲ್ಪಾಡಿಯ ಧರ್ಮದರ್ಶಿಗಳಾದ ಡಾ.ನಿ.ಬಿ ವಿಜಯ ಬಲ್ಲಾಳ ಮತ್ತು ಇನ್ನಿತರ ಹಿರಿಯರ ಸಹಯೋಗದೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದರು.

Related posts

Leave a Reply

Your email address will not be published. Required fields are marked *