Header Ads
Breaking News

ಮತದಾರರ ಒಳ ಮನಸ್ಸು ಮೋದಿ ಸರ್ಕಾರದ ವಿರುದ್ಧವಾಗಿದೆ :ಭರತ್ ಮುಂಡೋಡಿ ಹೇಳಿಕೆ

ಜಿಲ್ಲೆಯಲ್ಲಿ ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಮನೆ ಮನೆ ಭೇಟಿ ಯಶಸ್ವಿಯಾಗಿ ನಡೆಯುತ್ತಿದೆ. ಮನೆ ಮನೆ ಭೇಟಿ ಸಂದರ್ಭದಲ್ಲಿ ಮತದಾರನ ಒಳ ಮನಸ್ಸು ಅರಿಯುವ ಕೆಲಸ ಮಾಡಿದ್ದೇವೆ. ಮತದಾರರ ಒಳ ಮನಸ್ಸು ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ದವಾಗಿದೆ. ಇದೇ ರೀತಿಯ ವಾತಾವರಣ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರು.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮತ್ತು ಮೋದಿ ಮತ್ತು ನಳಿನ್ ಕುಮಾರ್ ಕಟೀಲ್ ಅವರ ವೈಫಲ್ಯಗಳನ್ನು ತಿಳಿಸುವ ಕೆಲಸ ಕಳೆದ 10 ದಿನಗಳಿಂದ ಆಗುತ್ತಿದೆ. ಎಲ್ಲ ಕಡೆ ಕೂಡ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಮತದಾರರಲ್ಲಿ ಬದಲಾವಣೆಯ ಮನೋಸ್ಥಿತಿ ಮೂಡಿದೆ. ನಮ್ಮ ಕ್ಷೇತ್ರ ಮತ್ತು ನಮ್ಮ ಬದುಕಿಗಾಗಿ ಮೋದಿ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ. ಮೋದಿ ಸರ್ಕಾರದಿಂದ ಆದ ತೊಂದರೆಗಳನ್ನು ಮನೆ ಮನೆ ಭೇಟಿ ಸಂದರ್ಭದಲ್ಲಿ ಮತದಾರರು ತಿಳಿಸುತ್ತಿದ್ದಾರೆ. ಮೋದಿ ಕೇವಲ ಮಾತುಗಾರಿಕೆಯಿಂದ ಈಗಲೂ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆದರೂ ಜನರ ಒಳ ಮನಸ್ಸು ಸಂಪೂರ್ಣ ಮೋದಿಯ ವಿರುದ್ದವಾಗಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೆ ಕೆಲಸಗಳು ಆಗುತ್ತಿಲ್ಲ ಸರಕಾರಿ ಸಾಮ್ಯದ ಸಂಸ್ಥೆಗಳು ಮುಚ್ಚುವ ಹಂತ ತಲುಪಿದೆ. ಬಿಎಸ್‌ಎನ್‌ಎಲ್ ಸಂಸ್ಥೆಯ ನೌಕರರಿಗೆ ವೇತನ ನೀಡಲು ಕೇಂದ್ರ ಸರಕಾರದಿಂದ ಆಗುತ್ತಿಲ್ಲ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ 10ವರ್ಷಗಳ ವೈಫಲ್ಯದ ಬಗ್ಗೆ ಮತ್ತು ವಿದ್ಯಾವಂತ, ಸುಸಂಸ್ಕೃತ ಮಿಥುನ್ ರೈಯವರ ಮೇಲೆ ಯುವ ಸಮುದಾಯಕ್ಕೆ ಒಳ್ಳೆಯ ಭಾವನೆ ಮೂಡಿದೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಸುಳ್ಯ ತಾಲೂಕಿನಲ್ಲಿ ಬಿಜೆಪಿಗೆ ಯಾವುದೇ ರೀತಿಯ ಮುನ್ನಡೆ ಸಿಗುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಮಾತನಾಡಿ ಬಿಜೆಪಿ ಅಲ್ಪಸಂಖ್ಯಾತರ ಮೇಲೆ ದ್ವಂದ ನಿಲುವು ಪ್ರಕಟಿಸುತ್ತಿದೆ. ಅಲ್ಪಸಂಖ್ಯಾತರ ಮತ ಬೇಡ ಎನ್ನುವ ಬಿಜೆಪಿಗರು ಮತ್ತು ಸಂಸದ ಕಟೀಲ್ ಅವರು ರಾತ್ರೋರಾತ್ರಿ ಮುಸ್ಮಿಂ ಧರ್ಮಗುರುವನ್ನು ಭೇಟಿ ಮಾಡುತ್ತಾರೆ. ಇದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯ ಡಾ. ರಘು, ಮುಖಂಡರಾದ ಎಸ್ . ಸಂಶುದ್ದೀನ್, ಗೋಕುಲ್‌ದಾಸ್ ಸತೀಶ್ ಕೂಜುಗೋಡು, ಜೂಲಿಯಾನ ಕ್ರಾಸ್ತಾ, ಬೀರಾಮೋಯಿದ್ದೀನ್, ಜೆಡಿಎಸ್ ಮುಖಂಡ ಜಾಕೆ ಮಾಧವ ಗೌಡ, ವಿನೂಪ್ ಮಲ್ಲಾರ, ಭವಾನಿಶಂಕರ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *