Header Ads
Breaking News

ಮತ್ತೆ ಒಂದು ವಾರ ವಿಶ್ರಾಂತಿಗೆ ತೆರಳಿದ ದೇವೇಗೌಡರು

ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪತ್ನಿಯೊಂದಿಗೆ ಮತ್ತೆ ಪಂಚಕರ್ಮ ಚಿಕಿತ್ಸೆಗಾಗಿ ಕಾಪು ಮೂಳೂರಿನ ಖಾಸಗಿ ರೆಸಾರ್ಟ್‍ಗೆ ಆಗಮಿಸಿದ್ದಾರೆ. ಇನ್ನು ಇಂದು ಅಥವಾ ನಾಳೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬೇಟಿಯಾಗುವ ಸಾಧ್ಯತೆ ಕೂಡಾ ಇದೆ. ಹಾಗೆಯೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾಯಾಗವನ್ನು ನಡೆಸಲಿದ್ದಾರೆ.

ಮೇ 16ರವರೆಗೆ ಪ್ರಕೃತಿ ಚಿಕಿತ್ಸಾಲಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ವಿಶ್ರಾಂತಿ ಪಡೆಯಲಿದ್ದು, ಮೇ 17ಕ್ಕೆ ತಿರುಪತಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೇ 18ಕ್ಕೆ ಹೆಚ್‍ಡಿ ದೇವೇಗೌಡರ 86ನೇ ವರ್ಷದ ಜನ್ಮದಿನವಾಗಿದ್ದು, ಆ ಪ್ರಯುಕ್ತ ತಿರುಪತಿಯಲ್ಲಿ ವಿಶೇಷ ಪೂಜೆಯನ್ನು ಕೂಡಾ ಸಲ್ಲಿಸಲಿದ್ದಾರೆ.

Related posts

Leave a Reply

Your email address will not be published. Required fields are marked *