Header Ads
Breaking News

ಮತ್ತೆ ಕೊರೊನಾ ಆತಂಕದಲ್ಲಿ ಕೇರಳ ರಾಜ್ಯ : ಕಾಸರಗೋಡಿನಲ್ಲಿ ಮತ್ತೆ 10 ಮಂದಿಗೆ ಕೊರೊನಾ ಸೋಂಕು

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14ಕ್ಕೇರಿದೆ.

ಮೇ 4ರಂದು ಮಹಾರಾಷ್ಟ್ರದಿಂದ ಬಂದ ಪೈವಳಿಕೆ ನಿವಾಸಿಯನ್ನು ತಲಪಾಡಿಯಿಂದ ಕಾರಿನಲ್ಲಿ ಕರೆದುಕೊಂಡು ಬಂದ(50 ವರ್ಷ) ವ್ಯಕ್ತಿ, ಇವರೊಂದಿಗಿದ್ದ ಮಹಿಳೆ(35ವರ್ಷ)ಗೆ ರೋಗ ಬಾಧಿಸಿದೆ. ಇವರ 11 ಮತ್ತು 8 ವರ್ಷದ ಮಕ್ಕಳಿಗೂ ರೋಗ ದೃಢೀಕರಿಸಲಾಗಿದೆ. ಕಾರು ಚಾಲಕ ಮೂರು ಬಾರಿ ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ರೋಗಿಯೊಂದಿಗೆ ಬಂದಿದ್ದು, ಈತ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್, ಲ್ಯಾಬ್, ಎಕ್ಸರೇ ರೂಂ ಮೊದಲಾದವುಗಳಿಗೆ ಪ್ರವೇಶಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ ರೋಗ ದೃಢೀಕರಿಸಲಾಗಿದೆ. ಕೇರಳ ರಾಜ್ಯದಲ್ಲಿ ಮತ್ತೆ 26 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಸಂಪರ್ಕದಿಂದ 11 ಮಂದಿಗೆ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ ಕಾಸರಗೋಡಿನ ಇಬ್ಬರು ಆರೋಗ್ಯ ಕಾರ್ಯಕರ್ತರು ಹಾಗು ವಯನಾಡಿನ ಒಬ್ಬರು ಪೆÇಲೀಸ್‍ಗೆ ರೋಗ ಬಾಧಿಸಿದೆ.

Related posts

Leave a Reply

Your email address will not be published. Required fields are marked *