Header Ads
Header Ads
Breaking News

ಮತ್ತೆ ಮುಳುಗಡೆಯಾದ ಸುರುಂಬಡ್ಕ ಕಿಂಡಿ ಅಣೆಕಟ್ಟು

ವಿಟ್ಲ ಸಮೀಪದ ಒಕ್ಕೆತ್ತೂರು ಸುರುಂಬಡ್ಕ ಕಿಂಡಿ ಅಣೆಕಟ್ಟು ಮತ್ತೆ ಮುಳುಗಡೆಯಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಸೋಮವಾರ ರಾತ್ರಿಯಿಂದ ಸುರಿದ ಮಳೆಯಿಂದ ಮಂಗಳವಾರ ಬೆಳಿಗ್ಗೆ ಈ ಕಿಂಡಿ ಅಣೆಕಟ್ಟು ತುಂಬಿದ್ದು, ಸುತ್ತಮುತ್ತಲಿನ ತೋಟ ಹಾಗೂ ಮನೆಗಳಿಗೆ ನೀರು ನುಗ್ಗಿತ್ತು.ಬಳಿಕ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಸಹಜ ಸ್ಥಿತಿಗೆ ಮರಳಿತ್ತು. ಇದೀಗ ಮಂಗಳವಾರ ಸಂಜೆ ಸುರಿದ ಮಳೆಯಿಂದ ಅಣೆಕಟ್ಟು ಮತ್ತೆ ಮುಳುಗಡೆಯಾಗಿದೆ. ನೀರಿನ ಮಟ್ಟ ನಿರಂತರ ಏರಿಕೆಯಾಗುವುದರಿಂದ ಈ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸೇತುವೆ ಕಾಮಗಾರಿ ಅವೈಜ್ಷಾನಿಕವಾದ್ದರಿಂದ ಇಲ್ಲಿ ನಿರಂತರವಾಗಿ ಈ ರೀತಿಯಾಗಿ ಪರಿಣಾಮಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Related posts

Leave a Reply

Your email address will not be published. Required fields are marked *