Header Ads
Header Ads
Header Ads
Header Ads
Header Ads
Header Ads
Breaking News

ಮದರಸ ರೇಂಜ್ ಬದಲಾವಣೆ ಮಾಡುವ ವಿಚಾರ : ಕಾರ್ಯದರ್ಶಿ ಮೇಲೆ ಮಾರಾಕಾಯುಧಗಳಿಂದ ಹಲ್ಲೆ

ವಿಟ್ಲ: ಮದರಸ ರೇಂಜ್ ಬದಲಾವಣೆ ಮಾಡುವ ವಿಚಾರದಲ್ಲಿ ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಮೇಲೆ ತಂಡಯೊಂದು ಮಾರಾಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ವಿಟ್ಲ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಅಬ್ದುಲ್ ಅಶ್ರಪ್(46) ಗಾಯಗೊಂಡವರು. ಅಶ್ರಪ್ ಬೈಕಿನಲ್ಲಿ ತನ್ನ ಮನಗೆ ತೆರಳಿತ್ತಿದ್ದ ವೇಳೆ ಬುಡೋಳಿ ಜಂಕ್ಷನ್ ನಲ್ಲಿ ಬುಡೋಳಿ ನಿವಾಸಿಗಳಾದ ಜುನೈದ್ ಯಾನೆ ಜುನ್ನಿ, ಅನ್ಸಾರ್ ಯಾನೆ ಅಂಚ್ಚು, ಆಟೋ ಚಾಲಕ ಇಕ್ಬಾಲ್, ಮತ್ತಿತರಿದ್ದ ತಂಡ ಅಡ್ಡಗಟ್ಟಿ ಮಾರಾಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಮಜೀದ್ ದಾರಿಮಿ ಅವರ ವಿಷಯಕ್ಕೆ ಬಂದರೆ ಸುಮ್ನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಶ್ರಪ್ ಹೇಳಿಕೆ ನೀಡಿದ್ದು, ಮಜೀದ್ ದಾರಿಮಿ ಅವರು ಹೊಸತಾಗಿ ಕೊಡಾಜೆ ರೇಂಜ್ ಅನ್ನು ಮಾಡುವ ಉದ್ದೇಶದಿಂದ ಬುಡೋಳಿ ಮದರಸದ ಹೆಸರಿನಲ್ಲಿ ನಕಲಿ ಒಪ್ಪಿಗೆ ಪತ್ರ , ಮೊಹರು ಸೃಷ್ಡಿಸಿ ರೇಂಜ್ ಕೇಂದ್ರ ಸಮಿತಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಈ ಹಲ್ಲೆ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ವಿಟ್ಲ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *