Header Ads
Header Ads
Breaking News

ಮದೀನಾ ತಲುಪಿದ ಮಂಗಳೂರಿನ ಹಜ್ಜ್ ಯಾತ್ರಾರ್ಥಿಗಳು : ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ತಂಡದಿಂದ ಸ್ವಾಗತ

ಕೇಂದ್ರ ಹಜ್ಜ್ ಸಮಿತಿಯ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ಯಾತ್ರೆಯಾಗಿ ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಲುಪಿದ ಮಂಗಳೂರಿನ150 ಮಂದಿಯ ಮೊದಲ ಹಜ್ಜ್ ತಂಡಕ್ಕೆ ಪ್ರತಿವರ್ಷದಂತೆ ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ತಂಡದಿಂದ ಭವ್ಯ ಸ್ವಾಗತ ನೀಡಲಾಯಿತು. ದೀರ್ಘ ಪ್ರಯಾಣದಿಂದ ದಣಿದ ಯಾತ್ರಾರ್ಥಿಗಳಿಗೆ ನೀರು ಖರ್ಜೂರ ಸೇರಿದಂತೆ ವಿಶೇಷ ರೀತಿಯ ಫಲಹಾರದ ಕಿಟ್ ನೀಡಿ ಪವಿತ್ರ ನಗರ ಮದೀನಕ್ಕೆ ಬರಮಾಡಿಕೊಳ್ಳಲಾಯಿತು.

ಅವರ ವಸತಿ ಕೇಂದ್ರಕ್ಕೆ ತೆರಳಿ ಪ್ರವಾದಿ ನಗರ ಮದೀನಾ ಮುನವ್ವರದ ಬಗ್ಗೆ ಅತ್ಯಗತ್ಯ ಮಾಹಿತಿ ನೀಡಲಾಯಿತು. ಮಂಗಳೂರು ವಿಮಾನ ನಿಲ್ದಾಣದಿಂದ ಜುಲೈ 17 ರಂದು ಹೊರಟ ಮೊದಲ ಹಜ್ಜ್ ತಂಡ ಮದೀನಾ ತಲುಪಿದ್ದು. ಜುಲೈ 18, 19ರಂದು ತಲಾ ಎರಡು ವಿಮಾನದಂತೆ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ,ಕೊಡಗು, ಹಾಸನ ಚಿಕ್ಕಮಗಳೂರು ಜಿಲ್ಲೆಗಳ ಒಟ್ಟು 748 ಹಜ್ಜ್ ಯಾತ್ರೆಕರು 5ವಿಮಾನಗಳಲ್ಲಿ ಮದೀನಾ ತಲುಪಲಿದ್ದಾರೆ.

Related posts

Leave a Reply

Your email address will not be published. Required fields are marked *