

ಕಡಬದಿಂದ ಮೂಲ್ಕಿಯ ಚಿತ್ರಾಪು ಬಳಿಯ ಖಾಸಗಿ ರೆಸಾರ್ಟ್ಗೆ ಬಂದಿದ್ದ ಕುಟುಂಬವೊಂದರ ನಾಲ್ವರು ಸದಸ್ಯರನ್ನು ರಕ್ಷಿಸಿದ ಮೂಲ್ಕಿಯ ಮಂತ್ರ ಸಫಿರ್ಂಗ್ ಕ್ಲಬ್ನ ಶಮಂತ್ ಗೌಡ. ಅಂದು ತನ್ನ ನಿಶ್ವಿತಾರ್ಥದ ದಿನದಲ್ಲಿಯೂ ಸಾಹಸ ಮೆರೆದಿದ್ದು ಇದೀಗ ಅವರು ರಕ್ಷಣೆ ಮಾಡುವ ವಿಡಿಯೋ ವೈರಲ್ ಆಗಿದೆ. ಶಾಂಭವಿ ಹೊಳೆಯಲ್ಲಿ ಈಜಾಡಲು ತೆರಳಿದ್ದ ಕುಟುಂಬವೊಂದರ ಇಬ್ಬರು ಮಕ್ಕಳನ್ನು ಹಾಗೂ ಇಬ್ಬರು ಮಹಿಳೆಯರನ್ನು ತನ್ನ ಕ್ಲಬ್ನ ಸಹಪಾಠಿ ನಿಹಾಲ್ ಜೊತೆಗೂಡಿ ಸ್ವತಹ ನೀರಿಗೆ ಹಾರಿ ರಕ್ಷಿಸಿದ್ದ ಶಮಂತ್, ನೀರಿನಲ್ಲಿದ್ದ ಜಯರಾಮ ಗೌಡ ಅವರನ್ನು ರಕ್ಷಿಸಿದ್ದರೂ ಸಹ ಅವರ ಪ್ರಾಣ ಉಳಿಸಲಾಗಲಿಲ್ಲ, ಶಾಂಭವಿ ಹೊಳೆಯ ಸಮುದ್ರ ಸಂಗಮ ಸ್ಥಳ ಅಳಿವೆ ಬಾಗಿಲಿನ ಬಳಿಯ ಸಸಿಹಿತ್ಲು ಬೀಚ್ಗೆ ಸಂಪರ್ಕಿಸುವ ಹೊಳೆಯಲ್ಲಿ ಈ ಘಟನೆ ಡಿ.31ರಂದು ನಡೆದಿತ್ತು. ರಕ್ಷಣೆ ಮಾಡಿ ಸಾಹಸ ಮೆರೆದ ಶಮಂತ್ ಅವರು ಅಂದೇ ಡಿ.31ರಂದು ರಾತ್ರಿ ನಿಶ್ಚಿತಾರ್ಥದ ತಯಾರಿಯಲ್ಲಿದ್ದರೂ ಸಹ ಕೆಲವೇ ಗಂಟೆಗಳ ಮುಂಚೆ ಅಸಹಾಯಕರ ಧ್ವನಿಗೆ ಆಸರೆಯಾಗಿ ಅಪಾಯವನ್ನು ಲೆಕ್ಕಿಸದೇ ನೀರಿಗಿಳಿದು ಸಾಹಸ ಮೆರೆದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಅವರು ಕಾರ್ಯಾಚರಣೆ ನಡೆಸಿದ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.