Header Ads
Header Ads
Breaking News

ಮದ್ಯವರ್ತಿಗಳ ಹಾವಳಿ ತಪ್ಪಿಸಲು ವಧು-ವರಾನ್ವೇಶಣೆ ಸೂಕ್ತ ಕಾರ್ಕಳದಲ್ಲಿ ಬಿಲ್ಲವ ಸೇವಾ ಸಂಘದ ಆರ್. ರಾಜು ಹೇಳಿಕೆ

ಮದ್ಯವರ್ತಿಗಳ ಹಾವಳಿ ತಪ್ಪಿಸಲು ಮತ್ತು ನೇರ ವಿವಾಹ ಸಂಬಂಧಗಳನ್ನು ಕಲ್ಪಿಸಿಕೊಡುವಲ್ಲಿ ವಧು-ವರಾನ್ವೇಷಣೆ ಪ್ರಮುಖ ಪಾತ್ರವಹಿಸುತ್ತದೆ. ಉತ್ತಮ ಸಂಬಂಧಗಳನ್ನು ನೋಡಿಕೊಂಡು ವಿಷ್ಯ ರೂಪಿಸಿಕೊಳ್ಳಲು ಇಂತಹಾ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್. ರಾಜು ಹೇಳಿದರು.

ಬಿಲ್ಲವ ಅಸೋಸಿಯೇಶನ್ ಬೆಂಗಳೂರು, ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಾರ್ಕಳ ಬಿಲ್ಲವ ಸೇವಾ ಸಮಾಜದ ಸಭಾಂಗಣದಲ್ಲಿ ನಡೆದ ಬಿಲ್ಲವ ಸಮುದಾಯದ ವಧು-ವರಾನ್ವೇಷಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿವಮೊಗ್ಗ ಬಿಲ್ಲವ ಸಮಾಜ ಸೇವಾ ಸಂಘದ ಪ್ರ. ಕಾರ್ಯದರ್ಶಿ ಹರೀಶ್, ಉದ್ಯಮಿ ಭಾಸ್ಕರ ಕೋಟ್ಯಾನ್, ಸಂಚಾಲಕ ಕೆ. ಪ್ರಭಾಕರ ಬಂಗೇರ, ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಪ್ರ. ಕಾರ್ಯದರ್ಶಿ ವಸಂತ, ಮಹಿಳಾ ಸಂಚಾಲಕಿ ನಾಗಮ್ಮ ಉಪಸ್ಥಿತರಿದ್ದರು.