Header Ads
Breaking News

ಮನಪಾದಲ್ಲಿ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಚಾಲನೆ : ಹೊಸದಾಗಿ ಅರ್ಜಿ ಸಲ್ಲಿಸುವಿಕೆಗೆ ಅವಕಾಶ

ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಉದ್ದಿಮೆ ಪರವಾನಿಗೆ ನವೀಕರಣ, ಹೊಸದಾಗಿ ಅರ್ಜಿ ಸಲ್ಲಿಸುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಉದ್ದಿಮೆ ಪರವಾನಿಗೆ ಅದಾಲತ್‍ಗೆ ಇಂದು ಬೆಳಗ್ಗೆ ಚಾಲನೆ ದೊರೆತಿದೆ.ಅದಾಲತ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ಉದ್ದಿಮೆದಾರರು ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇರೀತಿ ಹೊಸ ಪರವಾನಿಗೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡಾ ನಡೆಯುತ್ತಿದೆ. 2019-20ನೇ ಸಾಲಿಗೆ ಉದ್ದಿಮೆ ಪರವಾನಿಗೆ ನವೀಕರಿಸಲು ಬಾಕಿ ಇರುವ ಎಲ್ಲ ಉದ್ದಿಮೆದಾರರು ತಮ್ಮ ಉದ್ದಿಮೆ ಪರವಾನಿಗೆಯ ಮೂಲಪ್ರತಿ, ಉದ್ದಿಮೆ ಪರವಾನಿಗೆ ಕೋರುವ ಕಟ್ಟಡ ನಂಬರ್‍ನ ಸ್ವ-ಘೋಷಿತ ಆಸ್ತಿ ತೆರಿಗೆ ಪಾವತಿ ರಶೀದಿ ಪ್ರತಿ ಹಾಜರುಪಡಿಸಬೇಕು. ಚಲನ್ ಮೊತ್ತ ಪಾವತಿಸಿದಲ್ಲಿ ಸ್ಥಳದಲ್ಲೇ ನವೀಕೃತ ಪರವಾನಿಗೆ ಲಭಿಸುತ್ತಿದೆ. ಈ ಸಂದರ್ಭ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಅದಾಲತ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇರೀತಿಯಲ್ಲಿ ನೀರಿನ ಶುಲ್ಕ ಪಾವತಿಗೆ ಸಂಬಂಧಿಸಿಯೂ ಅದಾಲತ್ ನಡೆಸುವ ಚಿಂತನೆ ಇದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮನಪಾ ಉಪ ಆಯುಕ್ತ ಡಾ.ಸಂತೋಷ್ ಕುಮಾರ್, ಪರಿಸರ ಅಭಿಯಂತರ ಮಧು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *