
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಒಳಚರಂಡಿ ವಿಭಾಗವನ್ನು ಹೊರಗುತ್ತಿಗೆ ನೀಡಿರುವ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮತ್ತು ಹೊರಗುತ್ತಿಗೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ವಾದ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ವತಿಯಿಂದ ಮಂಗಳೂರಿನ ಪಾಲಿಕೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ ಅವರು, ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ಒಟ್ಟು 214 ಮಂದಿ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದೆಲ್ಲಾ ಕಾರ್ಮಿಕರಿಗೆ ವಂಚಿಸಿದ್ದು ಮರು ಪರಿಶೀಲಿಸಿ ಎಲ್ಲಾ ಕಾರ್ಮಿಕರ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸಂಘಟನೆ ಆಗ್ರಹಿಸುತ್ತಿದೆ. ಎಲ್ಲಾ ಕಾರ್ಮಿಕರ ವೇತನ, ಇತರ ಸೌಲಭ್ಯ ಕ್ಲಪ್ತ ಸಮಯಕ್ಕೆ ಸಿಗಬೇಕು. ಇದರ ಬಗ್ಗೆ ನಗರಾಭಿವೃದ್ಧಿ ಸರ್ಕಾರದ ಸಚಿವರಾದ ಭೈರತಿ ಬಸವರಾಜ್ ಅವರು ಮಧ್ಯಪ್ರವೇಶಿಸಿ ಒಳಚರಂಡಿ ವಿಭಾಗದ ಎಲ್ಲಾ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಿಸಬೇಕೆಂದು ಒತ್ತಾಯಿಸಿದ್ದರು.ಈ ಸಂದರ್ಭ ಪ್ರತಿಭಟನೆಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ನಾಗೇಶ್ ಮುಲ್ಲಕಾಡು, ಪದ್ಮನಾಭ ವಾಮಂಜೂರು, ನವೀನ್, ರಾಜೇಶ್ ಪೆರ್ನಾಜೆ, ಸಂತೋಷ್, ರವೀಂದ್ರ, ನಿತ್ಯಾನಂದ, ಜಯಂತ್, ಅಜಿತ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.