Header Ads
Breaking News

ಮನಪಾ ವ್ಯಾಪ್ತಿಯ ಅಳಕೆಯಲ್ಲಿ ನೂತನ ಮಾರುಕಟ್ಟೆ : ಶಾಸಕ ವೇದವ್ಯಾಸ್ ಕಾಮತ್ ಅವರಿಂದ ಉದ್ಘಾಟನೆ

ಮಂಗಳೂರು ಮಹನಗರ ಪಾಲಿಕೆ ವ್ಯಾಪ್ತಿಯ ಡೊಂಗರಕೇರಿಯ ಅಳಕೆ ವಾರ್ಡಿನಲ್ಲಿ 1.40 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಮಾರುಕಟ್ಟೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಾಸಕ ವೇದವ್ಯಾಸ್ ಕಾಮತ್ ಅವರು ನೂತನ ಮಾರುಕಟ್ಟೆಯನ್ನು ಉದ್ಘಾಟಿಸಿದರು.

ನಗರದ ಅಳಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕರಂಗಲ್ಪಾಡಿ, ಕಾರ್‍ಸ್ಟ್ರೀಟ್ ಸೇರಿದಂತೆ ಮಂಗಳೂರಿನಲ್ಲಿರುವ ಎಲ್ಲ ಮಾರುಕಟ್ಟೆಗಳನ್ನು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಂತಹಂತವಾಗಿ ಮೇಲ್ದರ್ಜೆಗೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹಿಂ#ದಿನ ಅವಧಿಯಲ್ಲಿ ಚುನಾವಣೆಯ ಕಾರಣಕ್ಕಾಗಿ ವಿವಿಧ ಕಡೆಗಳಲ್ಲಿ ಮಾರುಕಟ್ಟೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಆದರೆ ಅದಕ್ಕೆ ಬೇಕಾದ ಅನುದಾನವನ್ನು ಜೋಡಿಸುವ ಕಾರ್ಯ ನಡೆದಿರಲಿಲ್ಲ. ಅಂತಹ ಮಾರುಕಟ್ಟೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವ ದೊಡ್ಡ ಜವಾಬ್ದಾರಿ ನಮ್ಮ ಹೆಗಲೇರಿತ್ತು. ಅಳಕೆ ಮಾರುಕಟ್ಟೆಯನ್ನು ಸಾರ್ವಜನಿಕರಿಗೆ ಒದಗಿಸಲಾಗಿದೆ. ಶೀಘ್ರವೇ ಉರ್ವಾ ಮಾರುಕಟ್ಟೆಯನ್ನು ಉದ್ಘಾಟಿಸಲಾಗುವುದು. ಕಂಕನಾಡಿ ಮತ್ತು ಕದ್ರಿ ಮಾರುಕಟ್ಟೆ ಒಂದಿಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದವರು ಹೇಳಿದರು.

536.19 ಚದರ ಮೀಟರ್ ವಿಸ್ತೀರ್ಣದ ನೂತನ ಮಾರುಕಟ್ಟೆಯನ್ನು ಮುಖ್ಯಮಂತ್ರಿಗಳ ನಗರೋತ್ಥಾನದದ ವಿಶೇಷ ಅನುದಾನದ 50 ಲಕ್ಷ ರೂ., ನಗರ ಪಾಲಿಕೆಯ ಎಂಟರ್‍ಪ್ರೈಸಸ್ ಅನುದಾನದಿಂದ 50 ಲಕ್ಷ ರೂ. ಹಾಗೂ ಉಳಿಕೆ 30 ಲಕ್ಷ ರೂ.ಗಳನ್ನು ಮಂಗಳೂರು ದಕ್ಷಿಣ ಶಾಸಕರ ವಿಶೇಷ ಅನುದಾನ ಹಾಗೂ 10.40 ಲಕ್ಷ ರೂ.ಗಳನ್ನು ಪಾಲಿಕೆಯ ಅನುದಾನದಿಂದ ಪೂರ್ಣಗೊಳಿಸಲಾಗಿದೆ. ಇದರಲ್ಲಿ ತರಕಾರಿಯ 6, ಸಾಮಾನ್ಯ, 4, ಹಣ್ಣಿನ 4, ಮಟನ್ 2 ಹಾಗೂ ಬೀಫ್ ಹಾಗೂ ಪೊರ್ಕ್‍ನ ತಲಾ ಒಂದು ಮಳಿಗೆಗಳು ಸೇರಿವೆ. ಇದಲ್ಲದೆ ತಲಾ ಒಂದರಂತೆ ಇಲೆಕ್ಟ್ರಿಕಲ್ ಪ್ಯಾನಲ್ ಕೊಠಡಿ, ನಿರ್ವಹಣಾ ಕೊಠಡಿ, ಮಾರುಕಟ್ಟೆ ಕೊಠಡಿ, ಡಿಜಿ ಕೊಠಡಿ,ಎರಡು ಒಣಮೀನು ಮಳಿಗೆ, 4 ಹೂವಿನ ಮಳಿಗೆ ಹಾಗೂ 12 ಹಸಿಮೀನು ಮಾರುಕಟ್ಟೆ ಸೇರಿದೆ.

ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿರಣ್ ಕುಮಾರ್, ಪೂರ್ಣಿಮಾ, ಶರತ್ ಕುಮಾರ್, ಜಗದೀಶ್ ಶೆಟ್ಟಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯೆ ಜಯಶ್ರೀ ಜೆ. ಕುಡ್ವ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *