Header Ads
Header Ads
Breaking News

ಮನಪಾ ವ್ಯಾಪ್ತಿಯ ಶಕ್ತಿನಗರ ವಾರ್ಡಿನ ರಸ್ತೆ ಅಭಿವೃದ್ಧಿಗೆ ಚಾಲನೆ : ಶಾಸಕ ಡಿ. ವೇದವ್ಯಾಸ ಕಾಮತ್‌ರಿಂದ ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ 35ನೇ ಶಕ್ತಿನಗರ ವಾರ್ಡ್‌ನ ಪದವು ಸೆಂಟ್ರಲ್‌ನಲ್ಲಿ ನೀತಿನಗರದಿಂದ ರಾಜೀವ್ ನಗರದ ತನಕ ಮತ್ತು ಸಾನಿಧ್ಯದ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.ಶಕ್ತಿನಗರ ವಾರ್ಡಿನ ಪದವು ಸೆಂಟಲ್ ಮತ್ತು ನೀತಿನಗರದಿಂದ ರಾಜೀವ್ ನಗರದ ತನಕ ಮತ್ತು ಸಾನಿಧ್ಯದ ಮುಖ್ಯ ರಸ್ತೆ ಅಭಿವೃದ್ಧಿ ಕಾಣದೆ ಅದೇಷ್ಟೋ ವರ್ಷಗಳಿಂದ ಹದಗೆಟ್ಟು ಹೋಗಿತ್ತು. ಇದೀಗ ಪಿಡಬ್ಲು ಇಲಾಖೆಯ ವತಿಯಿಂದ ಒಂದೂವರೆ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸದರು. ಇದೇ ವೇಳೆ ಮಾತನಾಡಿದ ಶಾಸಕರು ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ವಿಶೇಷ ಮುತುವರ್ಜಿಯಲ್ಲಿ ಅನುದಾನ ಬಿಡುಗಡೆ ಮಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. 

ಈ ಸಂದರ್ಭ ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಕಾಂಟ್ರಾಕ್ಟರ್ ಎಂ.ಜಿ. ಹುಸೇನ್, ಸಹಿತ ವಿವಿಧ ಅಧಿಕಾರಿಗಳು ಮತ್ತು ಸ್ಥಳೀಯರು ಈ ವೇಳೆ ಹಾಜರಿದ್ದರು.

Related posts

Leave a Reply

Your email address will not be published. Required fields are marked *