Header Ads
Header Ads
Breaking News

ಮರಣ ಕೂಪವಾದ ಪುತ್ತೂರಿನ ಎಪಿಎಂಸಿ ರಸ್ತೆ

ಪುತ್ತೂರಿನ ಎಪಿಎಂಸಿ ರಸ್ತೆಯ ಪಕ್ಕದಲ್ಲಿರುವ ಹೊಂಡವೊಂದು ಈ ರಸ್ತೆಯಲ್ಲಿ ಸಂಚರಿಸುವ ಹಾಗೂ ವಾಹನ ನಿಲ್ಲಿಸಿ ಹೋಗುವವರಿಗೆ ಮರಣ ಕೂಪವಾಗಿ ಪರಿಣಮಿಸಿದೆ. ಎಪಿಎಂಸಿ ರಸ್ತೆಯ ಪಕ್ಕದ ಚರಂಡಿಯನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಚರಂಡಿಯನ್ನು ಅಗೆದು ನೀರು ಸರಾಗವಾಗಿ ಹಾದು ಹೋಗುವಂತೆ ಪುತ್ತೂರು ನಗರಸಭೆಯ ಅಧಿಕಾರಿಗಳು ಮಾಡಿದ್ದರು.

ಆದರೆ ದುರಸ್ತಿ ಮಾಡಿದ ಸಂದರ್ಭದಲ್ಲಿ ನಿರ್ಮಿಸಿದ ಹೊಂಡವನ್ನು ಮುಚ್ಚದೇ ಹೋದ ಪರಿಣಾಮ ಇದೀಗ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಮರಣ ಕೂಪವಾಗಿ ಪರಿಣಮಿಸಿದೆ. ರಸ್ತೆ ಬದಿ ನಿಲ್ಲಿಸುವ ವಾಹನಗಳು ಈ ಹೊಂಡದಲ್ಲಿ ನಿರಂತರ ಬೀಳಲಾರಂಭಿಸಿದೆ. ಕಾಮಗಾರಿ ನಡೆಸಿ ಮೂರು ತಿಂಗಳಾದರೂ ಹೊಂಡ ಮುಚ್ಚದಿರುವ ಪರಿಣಾಮ ಈ ರೀತಿಯ ಅವಘಡಗಳಿಗೆ ಕಾರಣವಾಗುತ್ತಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.

Related posts

Leave a Reply

Your email address will not be published. Required fields are marked *