Header Ads
Breaking News

ಮರದ ದಿಮ್ಮಿ ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ-ಮೆಲ್ಕಾರ್ ಸಮೀಪದ ಮಾರ್ನಬೈಲುವಿನಲ್ಲಿ ನಡೆದ ದುರ್ಘಟನೆ

ಬಂಟ್ವಾಳ: ಮರದ ದಿಮ್ಮಿಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ಬಳಿಕ ರಸ್ತೆಯಿಂದ ಬದಿಗೆ ಉರುಳಿ ಬಿದ್ದ ಘಟನೆ ಬಂಟ್ವಾಳ ಟ್ರಾಫಿಕ್ಸ್ ಪೋಲಿಸ ಠಾಣಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ಮಾರ್ನಬೈಲು ಜಂಕ್ಸ್ ನ್ ನಲ್ಲಿ ಇಂದು ಮುಂಜಾನೆ ವೇಳೆ ನಡೆದಿದೆ.

ಘಟನೆಯಲ್ಲಿ ಯಾವುದೇ ಪ್ರಾಣ ಅಪಾಯ ಸಂಭವಿಸದೆ ಲಾರಿ ಮಾತ್ರ ಜಖಂ ಗೊಂಡಿದೆ, ಮೂರಕ್ಕೂ ಅಧಿಕ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿಬಿದ್ದಿದೆ. ವಿದ್ಯುತ್ ತಂತಿಗಳು ಕಡಿದುಹೋಗಿ ಅಪಾರ ನಷ್ಟ ಸಂಭವಿಸಿದೆ. ಮೆಲ್ಕಾರ್ ನಿಂದ ಬೃಹತ್ ಗಾತ್ರದ ಮರಗಳನ್ನು ತುಂಬಿಸಿಕೊಂಡು ಹೋಗುವ ವೇಳೆ ಸುಮಾರು 5.30ರ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮಾರ್ನಬೈಲು ಎಂಬಲ್ಲಿ ಮಗುಚಿ ಬಿದ್ದಿದೆ.ಚಾಲಕನ ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳಿಗೆ ಡಿಕ್ಕಿಹೊಡೆದಿದೆ. ಮೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ತಂತಿಗಳು ಕಡಿದು ನೆಲಕ್ಕುರುಳಿದೆ.ಈ ಭಾಗದ ಜನರಿಗೆ ವಿದ್ಯುತ್ ಕಡಿತಗೊಂಡಿದೆ.

ಮೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬಗಳನ್ನು ಹಾಕಿದ ಬಳಿಕವೇ ಈ ಭಾಗದ ಜನರಿಗೆ ವಿದ್ಯುತ್.ಲಾರಿ ಮಗುಚಿ ಬಿದ್ದ ವೇಳೆ ಲಾರಿ ಚಾಲಕ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ. ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *