Header Ads
Header Ads
Breaking News

ಮರಳಿಗಾಗಿ ಶಾಸಕರ ಮನೆಯತ್ತ ಕಟ್ಟಡ ಕಾರ್ಮಿಕರ ಬೃಹತ್ ಪಾದಯಾತ್ರೆ

ಕುಂದಾಪುರ: ಕುಂದಾಪುರ, ಬೈಂದೂರು ಭಾಗಗಳಲ್ಲಿ ಅವಶ್ಯವಿರುವ ಕಡೆಗಳಲ್ಲಿ ಮರಳು ತೆಗೆಯುವ ಕುರಿತು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಕುಂದಾಪುರ ಹಾಗೂ ಬೈಂದೂರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ(ಸಿಐಟಿಯು) ಸಂಘಟನೆಯ ನೇತೃತ್ವದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮನೆಗೆ ಕಾರ್ಮಿಕರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು.

ಕುಂದಾಪುರದ ವಿನಾಯಕ ಥಿಯೇಟರ್ ಎದುರಿನಿಂದ ಆರಂಭಗೊoಡ ಪಾದಯಾತ್ರೆಯಲ್ಲಿ ದಾರಿಯೂದ್ದಕ್ಕೂ ವಿವಿಧ ಗ್ರಾಮ ಘಟಕಗಳ ಕಾರ್ಯಕರ್ತರು ಹೂವನ್ನು ಎಸೆಯುವುದರ ಮೂಲಕ ಪಾದಯಾತ್ರೆಯನ್ನು ಸ್ವಾಗತಿಸಿದರು. ಸಂಜೆ ೪.೩೦ರ ಸುಮಾರಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಕಾರ್ಮಿಕರನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆಯಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಹತ್ತು ದಿನದೊಳಗೆ ಅವಶ್ಯವಿರುವ ಕಡೆಗಳಲ್ಲಿ ಬಳ್ಕೂರು ಹಾಗೂ ಮಾಬುಕಳದಿಂದ ಮರಳನ್ನು ಪೂರೈಸುವ ಕೆಲಸ ಮಾಡುತ್ತೇನೆ. ದಿನೇ ದಿನೇ ಹೋದಂತೆ ಮರಳಿನ ಪ್ರಮಾಣವನ್ನು ಅಧಿಕ ಮಾಡಿ ಅರ್ಧ ನಡೆದ ಕಾಮಗಾರಿಗಳಿಗೆ ಕೂಡಲೇ ಮರಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಈ ಬಗ್ಗೆ ಈ ಹಿಂದಿನಿAದಲೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕಾಗಿ ಸದನದಲ್ಲಿ ಸರ್ಕಾವರನ್ನು ಸೆಳೆಯು ಕೆಲಸವನ್ನು ಮಾಡುತ್ತಾ ಬಂದಿರುವೆ ಎಂದರು.

Related posts

Leave a Reply

Your email address will not be published. Required fields are marked *