Header Ads
Breaking News

ಮರಳಿನಲ್ಲಿ ಹೂತು ಹೋದ ಸಿಎಂ ಕುಮಾರಸ್ವಾಮಿ ಕಾರು!

ಸಿಎಂ ಕುಮಾರಸ್ವಾಮಿಯ ಕಾರು ಮರಳಲ್ಲಿ ಹೂತು ಹೋದ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಪ್ರಕೃತಿ ಚಿಕಿತ್ಸೆಗಾಗಿ ಸಿಎಂ ಮೂಳೂರಿನ ಹೆಲ್ತ್ ರೆಸಾರ್ಟ್‌ನಲ್ಲಿ ದಾಖಲಾಗಿದ್ದರು. ಆದ್ರೆ ಶ್ರೀಲಂಕಾದಲ್ಲಿ ನಡೆದ ಸ್ಪೋಟದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಆಪ್ತರು ಸಾವನಪ್ಪಿದ ಹಿನ್ನಲೆಯಲ್ಲಿ ಚಿಕಿತ್ಸೆಯನ್ನು ಮೊಟಕುಗೊಳಿಸಿ ರಾಜ್ಯ ರಾಜಧಾನಿಗೆ ವಾಪಾಸದರು. ಆದ್ರೆ ಸಿಎಂ ತೆರಳಲು ಗಂಟೆ ವಿಳಂಬವಾಯಿತು. ಸಿಎಂ ಕಾರು ಚಾಲಕ ಮರಳಿನ ರಾಶಿಗೆ ಕಾರನ್ನು ಇಳಿಸಿದ್ದರಿಂದ ನಾಲ್ಕು ಚಕ್ರ ಮರಳಿನಲ್ಲಿ ಹೂತು ಹೋಯಿತು.
ಜೆಸಿಬಿ, ಟ್ರಾಕ್ಟರ್ ಬಳಸಿ ಕಾರನ್ನು ಮೇಲಕ್ಕೆತ್ತಲಾಯಿತು. ಪೊಲೀಸರು, ರೆಸಾರ್ಟ್ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯಿತು. ನಂತರ ಸ್ವಲ್ಪ ದೂರ ಜೀಪ್ ನಲ್ಲಿ ತೆರಳಿ, ಕಾರು ಹತ್ತಿದ ಸಿಎಂ ಕುಮಾರಸ್ವಾಮಿ ಬೆಂಗಳೂರು ವಾಪಾಸದರು.

Related posts

Leave a Reply

Your email address will not be published. Required fields are marked *