Header Ads
Breaking News

ಮರಳುಗಾರಿಕೆ ಆರಂಭಕ್ಕೆ ಯುವ ಇಂಟೆಕ್ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಅವ್ಯವಹಾರ ಜಿಲ್ಲಾಡಳಿತ ಸುಪರ್ದಿಯಲ್ಲಿ ಸುಗಮವಾಗಿ ಸಾಗುತ್ತಿರುವುದು ಜಿಲ್ಲೆಯ ಜನರಿಗೆ ಮತ್ತು ಕಾರ್ಮಿಕರಿಗೆ ಮಾಡಿರುವ ದೊಡ್ಡ ದ್ರೋಹ ಎಂದು ಯೂತ್ ಇಂಟೆಕ್‍ನ ರಾಜ್ಯಾಧ್ಯಕ್ಷ ವರುಣ್ ಕುಮಾರ್ ಹೇಳಿದರು.

ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 12 ತಿಂಗಳಿಂದ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮರಳುಗಾರಿಕೆ ಪರವಾನಿಗೆ ನವೀಕರಿಸದೆ ಮೀನಾಮೇಷ ಎಣಿಸುತ್ತಿದೆ. ಇದರಿಂದ ಅಕ್ರಮವಾಗಿ ಗ್ರಾಮೀಣ ಪ್ರದೇಶದ ಮರಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಇವತ್ತು ಮಂಗಳೂರು ತಾಲುಕಿನಲ್ಲಿ ಯಾವುದೇ ಮರಳು ಸಿಗುತ್ತಿಲ್ಲ. ಕಟ್ಟಡ ಮತ್ತು ಮನೆ ಕಾಮಗಾರಿಗೆ ಮರಳು ಸಿಗದೆ ಮಾಲಕರು ಮತ್ತು ಕಾರ್ಮಿಕರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದ ಅವರು, ಮರಳು ಅವ್ಯವಹಾರವನ್ನು ನಿಲ್ಲಿಸಿ, ಮರಳುಗಾರಿಕೆ ಆರಂಭಿಸುವಂತೆ ಆಗ್ರಹಿಸಿದರು. ಮರಳಿಲ್ಲದೆ ಕಾರ್ಮಿಕ ಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲಾಧಿಕಾರಿ ಮತ್ತು ಗಣಿ ಇಲಾಖೆಯ ನಡೆಗೆ ಖಂಡನೆ ವ್ಯಕ್ತಪಡಿಸಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಯೂತ್ ಇಂಟೆಕ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ, ಚಿರಂಜೀವಿ ಅಂಚನ್, ಪುನೀತ್ ಶೆಟ್ಟಿ, ಸಿದ್ಧಿಕ್ ಹಸನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *