
ನೇತ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಸಂಬಂಧ ಪಟ್ಟಂತೆ ಮರಳು ಬ್ಲಾಕ್ ಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡುವ ಕುರಿತು ಯೋಜನೆ ರೂಪಿಸಲಾಗಿದೆ. ಇದನ್ನು ಲೈವ್ ಸ್ಟೀಮ್ ನಲ್ಲಿಯೇ ನೋಡುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕುಮಾರ್ ಹೇಳಿದರು. ಸೋಮೇಶ್ವರ ಬೀಚ್ ನಲ್ಲಿ ಸರ್ಕಾರಿ ಭೂಮಿ ಒತ್ತುವರಿ , ರಸ್ತೆ ಕಾಮಗಾರಿ ಪರಿಶೀಲನೆ, ಟೂರಿಸಂ ಅಭಿವೃದ್ಧಿ ಗಾಗಿ ಇತ್ತೀಚಿಗೆ ಅಲ್ಲಿಗೆ ಭೇಟಿ ನೀಡಿದ್ದೆ, ಈ ಸಮಯದಲ್ಲಿ ಅಲ್ಲಿ ಮರಳುಗಾರಿಕೆ ವಿಚಾರ ಬಂತು. ಮುಂದಿನ ದಿನಗಳಲ್ಲಿ ಬೀಚ್ ಗಳ ಅಭಿವೃದ್ಧಿಯ ಸಭೆ ಆಯೋಜಿಸಲಾಗುವುದು. ಸಿ.ಆರ್ ಝೆಡ್ ವ್ಯಾ ಪ್ತಿಯಲ್ಲಿ ಮೀನುಗಾರರ ಮನೆಯಲ್ಲಿಯೇ ಇತರರು ರೆಸಾರ್ಟ್ ಮಾಡಿದ್ದಾರೆ. ಎಂಬ ಕುರಿತು ದೂರು ಇದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.