Header Ads
Breaking News

ಮರಳು ಸಾಗಾಟದ ಲಾರಿ ಸ್ಕೂಟರ್‍ಗೆ ಢಿಕ್ಕಿ : ರಾಜಸ್ಥಾನ ಮೂಲದ ಮೇಘರಾಜ ಮೃತ್ಯು

ಅಕ್ರಮ ಮರಳು ಸಾಗಾಟದ ಕೇರಳ ನೋಂದಣಿಯ ಮಿನಿ ಲಾರಿ (407) ಸ್ಕೂಟರ್‍ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಟೈಲ್ಸ್ ಅಳವಡಿಸುವ ಕಾರ್ಮಿಕ ರಾಜಸ್ಥಾನ ಮೂಲದ ಬಾನಾವಾಸ ತಾಲೂಕಿನ ಲಾಡ್ಪುರಿಯ ನಿವಾಸಿ ಮೇಘರಾಜ (32) ಸ್ಥಳದಲ್ಲೇ ಮೃತಪಟ್ಟಿದ್ದ.

ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಸ್.ಪಿ ಲಕ್ಷ್ಮಿ ಪ್ರಸಾದ್, ಡಿವೈಎಸ್ಪಿ ದಿನಕರ್ ಶೆಟ್ಟಿ, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಸೇರಿದಂತೆ ಪೋಲೀಲಿಸ್ ಅಧಿಕಾರಿಗಳ ತಂಡ ಕಡಬಕ್ಕೆ ಮತ್ತು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಮಾ.1ರಂದು ಮಧ್ಯಾಹ್ನ ಅಪಘಾತ ಸಂಭವಿಸಿತ್ತು.

ಕೋಡಿಂಬಾಳ ಗ್ರಾಮದ ಮುಳಿಯ ಹೊನ್ನಪ್ಪ ಗೌಡರ ಹೊಸ ಮನೆಯ ಟೈಲ್ಸ್ ಅಳವಡಿಸುವ ಕೆಲಸ ಮಾಡಿಕೊಂಡಿದ್ದ ಮೇಘರಾಜ್ ಹೊನ್ನಪ್ಪ ಗೌಡರ ಸ್ಕೂಟರ್ ನಲ್ಲಿ ಪೈಂಟ್ ತರಲೆಂದು ಕಡಬಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿತ್ತು. ಅಪಘಾತದ ವೇಳೆ ಲಾರಿಯ ಹಿಂಬಂದಿ ಚಕ್ರ ರಾಜಸ್ಥಾನ ಮೂಲದ ಕಾರ್ಮಿಕ ಮೇಘರಾಜ್ ಅವರ ತಲೆಯ ಮೇಲೆ ಹರಿದು ತಲೆ ಪೂರ್ತಿ ಛಿದ್ರಗೊಂಡು, ಸ್ಥಳದಲ್ಲೇ ಮೇಘರಾಜ್ ಮೃತರಾಗಿದ್ದರು.

Related posts

Leave a Reply

Your email address will not be published. Required fields are marked *