Header Ads
Header Ads
Breaking News

ಮರವಂತೆಯ ಪುರಾಣ ಪ್ರಸಿದ್ಧ ದೇವಸ್ಥಾನ ಭಕ್ತ ಸಮೂಹ. ಜಿಟಿಜಿಟಿ ಮಳೆಯಲ್ಲಿ ಸಮುದ್ರ ಸ್ನಾನ ಮಾಡಿದ ಭಕ್ತರ ದಂಡು.

ಅತ್ತ ಪಶ್ಚಿಮದಲ್ಲಿ ಭೋರ್ಗರೆಯುತ್ತಿರುವ ಅರಬ್ಬೀ ಸಮುದ್ರ, ಇತ್ತ ಪೂರ್ವದಲ್ಲಿ ಶಾಂತವಾಗಿರುವ ಸೌಪರ್ಣಿಕ ನದಿ. ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ. ಎಲ್ಲಿ ನೋಡಿದರಲ್ಲಿಯೂ ಭಕ್ತರ ದಂಡು. ಒಂದೆಡೆ ಜಿಟಿಜಿಟಿ ಮಳೆ ಜಿನುಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಜನರು ಸಮುದ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದರು.ಇವೆಲ್ಲಾ ದೃಶ್ಯ ಕಂಡುಬಂದಿದ್ದು ನದಿ-ಕಡಲ ನಡುವಿನ ಅಪೂರ್ವ ತಾಣ ಮರವಂತೆಯ ಪುರಾಣ ಪ್ರಸಿದ್ಧ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ.ಕರ್ಕಾಟಕ ಅಮಾವಾಸ್ಯೆ ಅಂಗವಾಗಿ ಕಡಲತೀರದ ಶ್ರದ್ಧಾಕೇಂದ್ರ ಮರವಂತೆಯ ವರಾಹ ದೇವಸ್ಥಾನದಲ್ಲಿ ಜನಜಾತ್ರೆ ಮೇಳೈಸಿತು. ಹೌದು, ಮರವಂತೆಯ ನದಿ-ಕಡಲು ನಡುವಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನಕ್ಕೆ ಬೆಳಗ್ಗಿನಿಂದ ಎಲ್ಲೆಡೆಯಿಂದ ಜನಪ್ರವಾಹ ಹರಿದುಬಂತು. ಬೆಳಿಗ್ಗೆ 3.30ರಿಂದಲೇ ದೇವಸ್ಥಾನ ಪ್ರವೇಶಿಸಲು ಕಾದಿದ್ದವರ ಸರತಿಯ ಸಾಲು ಅರ್ಧ ಕಿಲೋಮೀಟರು ದೂರಕ್ಕೂ ವ್ಯಾಪಿಸಿತು. 

ಕೃಷಿ ಕಾರ್ಯ ಮುಗಿಸಿ ರೈತರು ಬಿಡುವಾಗಿದ್ದುದು, ಮೀನುಗಾರರು ಮೀನುಗಾರಿಕೆಗೆ ರಜೆ ಹಾಕಿದ್ದು ಮಾತ್ರವಲ್ಲದೇ ಹಾಗೊಮ್ಮೆ ಹೀಗೊಮ್ಮ ಮಳೆ ಬರುತ್ತಿದ್ದರೂ ದೇವಸ್ಥಾನದಲ್ಲಿ ದಾಖಲೆ ಸಂಖ್ಯೆಯಲ್ಲಿ ಜನ ಸಮೂಹ ಏರ್ಪಟ್ಟಿತ್ತು. ಬೆಳಿಗ್ಗೆನಿಂದಲೂ ಸಂಜೆಯ ತನಕ ಮರವಂತೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಜಮಾಯ ದೇವರ ದರ್ಶಸಿದ ಭಕ್ತರು ದೇವರ ದರ್ಶನ ಪಡೆದರು.ಕಿರಿಮಂಜೇಶ್ವರ, ಸೋಮೇಶ್ವರದಲ್ಲೂ ಸಹಸ್ರಾರು ಜನ ದೇವರ ದರ್ಶನ ಪಡೆದರು. ಮೂರೂ ಕಡೆಗಳಲ್ಲಿ ಹಲವರು ಸಮದ್ರ ಸ್ನಾನ ಮಾಡಿದರು. ಮರವಂತೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಮಚಂದ್ರ ಹೆಬ್ಬಾರ್, ಸದಸ್ಯರು ಅರ್ಚಕ- ಉಪಾದಿವಂತರು, ಸ್ವಯಂಸೇವಕರು ದೇವಾಲಯದೊಳಗೆ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರು. ಬಂದವರೆಲ್ಲ ದೇವರ ದರ್ಶನ ಮಾಡಿ, ಹಣ್ಣುಕಾಯಿ, ಕಾಣಿಕೆ ಸಮರ್ಪಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಇಲ್ಲಿನ ಸಂಪ್ರದಾಯದಂತೆ ನವ ವಧುವರರು ದೇವರಿಗೆ ಹರಕೆ ಸಲ್ಲಿಸಿದರು.ಕುಂದಾಪುರ ಡಿವೈಎಸ್‌ಪಿ ಬಿಪಿ ದಿನೇಶ್ ಕುಮಾರ್ ನೇತೃತ್ವದ ಪೊಲೀಸರ ತಂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಬಂದೋಬಸ್ತ್ ಏರ್ಪಡಿಸಿತು. ದೇವಸ್ಥಾನ ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಇರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಸಂಚಾರ ಪೊಲೀಸರು ಶ್ರಮಿಸಿದರು.

Related posts

Leave a Reply