
ಭಜನಾ ಪರಿಷತ್ತಿನ ಸಮಾಲೋಚನಾ ಸಭೆ ರಂದು ಮರ್ಧಾಳ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು. ಮಾರ್ಚ್ 11ರಂದು ಮಹಾ ಶಿವರಾತ್ರಿಯಂದು ಬೆಂಗಳೂರು ಮತ್ತು ಬೇರೆ ಬೇರೆ ಕಡೆಗಳಿಂದ ಸುಮಾರು 5000 ಕ್ಕಿಂತ ಹೆಚ್ಚು ಭಕ್ತಾಧಿಗಳು ಒಟ್ಟು ಸೇರಿ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ಭಜನಾ ಪರಿಷತ್ತಿನ ಕಾರ್ಯದರ್ಶಿಯಾದ ಜಯರಾಮ ನೆಲ್ಲಿತ್ತಾಯರ ಮಾರ್ಗದರ್ಶನದಂತೆ ಹೊಸ ತಾಲೂಕು ಕಡಬದಲ್ಲಿ ಭಜನಾ ಪರಿಷತ್ತನ್ನು ರಚಿಸಿಕೊಂಡು ಈ ವರ್ಷ ಕಡಬದಲ್ಲಿ ನಡೆಯುವ 60ನೇ ವರ್ಷದ ಏಕಾಹ ಭಜನೆಯಲ್ಲಿ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ರಾತ್ರಿ 10.30 ಕ್ಕೆ ಭಜನಾ ಪರಿಷತ್ತು ಉದ್ಘಾಟನೆ ಮಾಡಲಿದ್ದಾರೆ.
ಸಮಾಲೋಚನಾ ಸಭೆಯಲ್ಲಿ ಜಯರಾಮ ನೆಲ್ಲಿತ್ತಾಯ (ದಕ್ಷಿಣ ಕನ್ನಡ ಜಿಲ್ಲಾ ಭಜನಾ ಪರಿಷತ್ತಿನ ಕಾರ್ಯದರ್ಶಿ), ಸೀತಾರಾಮ ಗೌಡ ಪೆÇಸವೊಲಿಕೆ (ಅಧ್ಯಕ್ಷರು ಶ್ರೀ ದುಗಾರ್ಂಬಿಕಾ ದೇವಸ್ಥಾನ ಕಡಬ, ಮೇದಪ್ಪ (ಯೋಜನಾಧಿಕಾರಿ), ನಾರಾಯಣ ಶೆಟ್ಟಿ ಅತ್ಯಡ್ಕ, ಸತೀಶ್ ಪೂಜಾರಿ, ಬಾಬು (ಮೇಲ್ವಿಚಾರಕರು), ದರ್ಣಪ್ಪ ಗೌಡ( ಮೇಲ್ವಿಚಾರಕರು), ಶಿವಪ್ರಸಾದ್ ಮೈಲೇರಿ ಮತ್ತಿತರರು ಉಪಸ್ಥಿತರಿದ್ದರು.