Header Ads
Header Ads
Breaking News

ಮಲಬಾರ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ಕದ್ರಿ ಪಾರ್ಕ್‌ನಲ್ಲಿ ಪರಿಸರ ದಿನಾಚರಣೆ

 ಮಂಗಳೂರಿನ ಹೆಸರಾಂತ ಚಿನ್ನಾಭರಣ ಮಳಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಗಿಡಗಳನ್ನು ವಿತರಿಸಲಾಯ್ತು. ಈ ಮೂಲಕ ಸಂಸ್ಥೆಯು ಪರಿಸರಪರ ಕಾಳಜಿಯನ್ನು ಮೆರೆಯಿತು.

 ವಿಶ್ವದ ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಗಳ ಪೈಕಿ ಒಂದಾಗಿ ಕೋಟ್ಯಾಂತರ ಗ್ರಾಹಕರ ಮನಗೆದ್ದಿರುವ ಜ್ಯುವೆಲ್ಲರಿ ಮಳಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಮಾಜಮುಖಿ ಚಟುವಟಿಕೆಗಳಲ್ಲಿ ಕೂಡ ತೊಡಗಿಸಿಕೊಂಡು ಸಾಮಾಜಿಕ ಕಾಳಜಿಯನ್ನು ಮೆರೆಯುತ್ತಿದೆ. ಹೌದು, ನಿರಂತರವಾಗಿ ಪರಿಸರ ಪರವಾದ ಕಾಳಜಿಯನ್ನೂ ಮೆರೆಯುತ್ತಾ ಬರುತ್ತಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

 ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಕಾರ್ತಿಕ್ ಕುಮಾರ್ ಅವರು, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.  ಈ ಸಂದರ್ಭದಲ್ಲಿ ಗಿಡಗಳನ್ನು ಪಡೆದ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮಲಬಾರ್ ಗೋಲ್ಡ್‌ನ ಪರಿಸರ ಕಾಳಜಿಗೆ ಮೆಚ್ಚುಗೆಯನ್ನು ಸೂಚಿಸಿದರು.  ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಸ್ಟೋರ್ ಹೆಡ್ ಶರತ್‌ಚಂದ್ರನ್ ಸೇರಿದಂತೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

 ನಗರದ ಫಳ್ನೀರ್‌ನಲ್ಲಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಗುಣಮಟ್ಟದ ಚಿನ್ನ, ವಜ್ರಾಭರಣಗಳು ಗ್ರಾಹಕರಿಗೆ ಲಭ್ಯವಿದ್ದು, ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.ತನ್ನ ಉದ್ಯಮದ ಜೊತೆಗೆ ಪರಿಸರದ ಬಗ್ಗೆಯೂ ನಿರಂತರವಾಗಿ ಕಾಳಜಿಯನ್ನು ವಹಿಸಿಕೊಂಡು ಬಂದಿದ್ದು, ಪರಿಸರ ದಿನಾಚರಣೆಯ ಮೂಲಕ ಹಸಿರು ಬೆಳೆಸುವ ಪ್ರಕ್ರಿಯೆಗೆ ತನ್ನ ಕೊಡುಗೆಯನ್ನು ಸಲ್ಲಿಸಿದೆ. ಸಂಸ್ಥೆಯ ಈ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Related posts

Leave a Reply

Your email address will not be published. Required fields are marked *