Header Ads
Breaking News

ಮಲ್ಲಿಗೆಯಂಗಡಿ ಹೊಸಕಟ್ಟ ಎಂಬಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ : ಆರ್.ವಿ. ದೇಶಪಾಂಡೆ ಅವರಿಂದ ಶಿಲಾನ್ಯಾಸ

ಮಂಗಳೂರು ತಾಲೂಕು ಸೋರಿಂಜೆ ಗ್ರಾಮ ಪಂಚಾಯಿತಿಯ ದೇಲಂತಬೆಟ್ಟು ಹಾಗೂ ಕಟೀಲು ಗ್ರಾಮ ಪಂಚಾಯಿತಿಯ ಮಲ್ಲಿಗೆಯಂಗಡಿ ಹೊಸಕಟ್ಟ ಎಂಬಲ್ಲಿ ನಂದಿನಿ ನದಿಗೆ ಅಡ್ಡಲಾಗಿ ನರ್ಬಾಡ್ ಎಕ್ಸ್‍ಎಕ್ಸ್111 2017-18 ಯೋಜನೆಯಡಿಯಲ್ಲಿ ಸುಮಾರು 1,10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆಯ ಶಿಲಾನ್ಯಾಸವನ್ನು ಕಂದಾಯ ಸಚಿವ ಆರ್. ವಿ ದೇಶಪಾಂಡೆ ಶುಕ್ರವಾರ ನೆರವೇರಿಸಿದರು. 

ಈ ಸಂದರ್ಭ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷ್ಯತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್, ಕಟೀಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ದಯಾನಂದ, ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *