Header Ads
Breaking News

ಮಳೆಯಿಂದಾಗಿ ಕೊಟ್ಟಾರಚೌಕಿ ಜಂಕ್ಷನ್ ಮುಳುಗಡೆ ಹಿನ್ನೆಲೆ : ಮಂಗಳೂರು ಪೊಲೀಸರಿಂದ ಬದಲಿ ಮಾರ್ಗದ ಚಿಂತನೆ?

ಕಳೆದ ಬಾರಿಯ ಮಳೆ ಮಂಗಳೂರಿನ ಜನತೆಗೆ ಅಕ್ಷರಸಹ: ನರಕಸದೃಶ್ಯವಾಗಿತ್ತು. ಇಡೀ ನಗರಕ್ಕೆ ನಗರವೇ ಮುಳುಗಿ ಜನರು ಸಂಕಷ್ಟ ಅನುಭವಿಸಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಚಾರ. ಅರದಲ್ಲಿಯೂ ಕೊಟ್ಟಾರಚೌಕಿ ಜಕ್ಷನ್ ಮುಳುಗಿ ಮುಖ್ಯ ಸಂಪರ್ಕ ರಸ್ತೆ ಸಂಪರ್ಕವೇ ಖಡಿತಗೊಂಡಿತ್ತು.

ಇದರಿಂದ ಎಚ್ಚೆತ್ತುಕೊಂಡ ಮಂಗಳೂರು ಸಂಚಾರಿ ಪೊಲೀಸರು ಈ ಬಾರಿ ಒಂದು ವೇಳೆ ಅತಿಯಾಗಿ ಮಳೆ ಬಂದು ಈ ಬಾರಿಯೂ ಕೊಟ್ಟಾರಚೌಕಿ ಜಕ್ಷನ್ ಮುಳುಗಿದರೆ ಸಂಚಾರಿ ವ್ಯವಸ್ಥೆಗೆ ಯಾವುದೇ ತೊಂದರೆಯಾಗಬಾರದು ಎಂದು ಮುಜಾಗೃತ ಕ್ರಮವಾಗಿ ಇಂದು ಮದ್ಯಾಹ್ನ ಒಂದು ಗಂಟೆಗಳ ಕಾಲ ಕೆಪಿಟಿ ವೃತ್ತದ ಬಳಿ ಕೊಟ್ಟಾರಚೌಕಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿ ಕೆಪಿಟಿ-ಕಾವೂರು-ಕೂಳೂರು ಮಾರ್ಗವಾಗಿ ವಾಹನಗಳನ್ನು ಕಳುಹಿಸಿ ಟ್ರಾಫಿಕ್ ಪರಿಸ್ಥಿತಿ ಹೇಗಿರುತ್ತದೆ ಎಂದು ಮಾದರಿ ಪ್ರಯತ್ನ ಮಾಡಿದರು. ಒಂದು ವೇಳೆ ಈ ಪ್ರಯತ್ನ ಫಲಿಸುತ್ತದೆ ಎಂದಾದರೆ ಮುಂದಿನ ದಿನ ಕೊಟ್ಟಾರಚೌಕಿ ಮುಳುಗಡೆಯಾದರೆ ಈ ಮಾರ್ಗವಾಗಿ ಸಂಚಾರ ವ್ಯವಸ್ಥೆಯನ್ನು ಮಾಡಲು ಸಂಚಾರಿ ಪೊಲೀಸ್ ಇಲಾಖೆ ನಿರ್ಧರಿಸಿದೆ.

Related posts

Leave a Reply

Your email address will not be published. Required fields are marked *