Header Ads
Header Ads
Breaking News

ಮಹಾತ್ಮಾಗಾಂಧೀಜಿಯವರ 150ನೇ ಜನ್ಮ ದಿನಾಚರಣೆ : ಉಡುಪಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಚ್ಚ ಭಾರತ ಕಲ್ಪನೆ ಬಂದಿದ್ದೇ ಗಾಂಧೀಜಿಯವರಿಂದ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಹಾತ್ಮಾಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೇಂದ್ರ ಸರಕಾರದ ಅಪೇಕ್ಷಯಂತೆ ದೇಶದಾದ್ಯಂತ ವರ್ಷವಿಡೀ ನಡೆಯಲಿರುವ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಉಡುಪಿಯ ಅಜ್ಜರಕಾಡು ಬಳಿ ಇರುವ ಮಹತ್ಮಾಗಾಂಧೀಜಿ ಪುತ್ಥಳಿಗೆ ಹಾರಾರ್ಪಣೆಯನ್ನು ಮಾಡುವ ಮೂಲಕ ಕಾರ್ಯಕ್ರಮ ಆರಂಭಿಸಿದ ಶೋಭಾ ಕರಂದ್ಲಾಜೆ ಅವರು ಬಳಿಕ ಯಾತ್ರೆಗೆ ವಿದ್ಯುತ್ತಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಾಂಧೀಜಿಯವರ ಕಲ್ಪನೆ ಈಗಲೂ ಪ್ರಸ್ತುತವಾಗಿದ್ದು ಎಲ್ಲರೂ ಅನುಸರಿಸಬೇಕಾಗಿದೆ. ಪ್ರಧಾನಿ ಮೋದಿಯವರಿಗೆ ಸ್ವಚ್ಚ ಭಾರತದ ಕಲ್ಪನೆ ಹಾಗೂ ಪ್ರೇರಣೆ ಆಗಿದ್ದು ಗಾಂಧೀಜಿಯವರಿಂದ ಅದಕ್ಕಾಗಿಯೇ ದೇಶದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಶೌಚಾಲಯ ಕಟ್ಟಲು ಕೇಂದ್ರ ಖರ್ಚು ಮಾಡಿದೆ ಎಂದರು. ಗಾಂಧೀಜಿ ಸಂಕಲ್ಪ ಯಾತ್ರೆ ಉಡುಪಿಯ ಅಜ್ಜರಕಾಡಿನಿಂದ ಹಿಡಿದು ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ತನಕ ನಡೆಯಿತು. ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿಭಟ್ ಸಹಿತ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *