Header Ads
Breaking News

ಮಹಾಜನ ಸಭಾ ಬೆಂಗ್ರೆ, ಮನಪಾ ವತಿಯಿಂದ ಬೆಂಗ್ರೆ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಮಹಾಜನ ಸಭಾ ಬೆಂಗ್ರೆ ರಿ. ಹಾಗೂ ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಂಗ್ರೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಈ ವೇಳೆ ಮನಪಾ ಮೇಯರ್ ಪ್ರೇಮಾನಂದ್ ಶೆಟ್ಟಿ ಮಾತನಾಡಿ, ಈ ಸ್ವಚ್ಚತಾ ಕಾರ್ಯಕ್ರಮವು ಮಾರ್ಚ್ 7ವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ಕೈಜೋಡಿಸಲಿದ್ದಾರೆ. ಮಹಾಜನ ಸಭಾ ಬೆಂಗ್ರೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ವಚ್ಚ ಬಾರತ ಪರಿಕಲ್ಪನೆಯಲ್ಲಿ ಎಲ್ಲೆಡೆ ಸ್ವಚ್ಚತಾ ಕಾರ್ಯಕ್ರಮ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.
ಬಳಿಕ ಮನಪಾ ಜಂಟಿ ಆಯುಕ್ತರಾದ ಸಂತೋಷ್ ಕುಮಾರ್ ಮಾತನಾಡಿ, ಈ ಸ್ವಚ್ಚತಾ ಕರ್ಯಕ್ರಮ ಕೇವಲ ಮೂರು ದಿನಕ್ಕೆ ಸೀಮಿತವಾಗಿರಬಾರದು ಬದಲಾಗಿ ದಿನನಿತ್ಯ ಈ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿ ಅಂತ ಹೇಳಿದ್ರು.
ಬಳಿಕ ಮಹಾಜನ ಸಭಾ ಬೆಂಗ್ರೆ ರಿ. ಹಾಗೂ ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಂಗ್ರೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

Related posts

Leave a Reply

Your email address will not be published. Required fields are marked *