Header Ads
Header Ads
Breaking News

ಮಹಾಮಳೆಗೆ ಕೊಡಗು ತತ್ತರ. ಜೋಡುಪಾಲದಲ್ಲಿ ಭೀಕರ ದುರ್ಘಟನೆ . ಗುಡ್ಡ ಜರಿದು ಹಲವು ಮನೆಗಳು ನಾಶ.

ಸುಳ್ಯ: ಸಂಪಾಜೆ-ಮಡಿಕೇರಿ ಮಧ್ಯದ ಜೋಡುಪಾಲ ಎಂಬಲ್ಲಿ ಗುಡ್ಡ ಮೇಲಿನಿಂದಲೇ ಜರಿದ ಪರಿಣಾಮವಾಗಿ ಮೂರು ಮನೆಗಳು ಕೆಳಕ್ಕೆ ಜಾರಿ ನಾಶವಾಗಿದೆ ಮನೆಯಲ್ಲಿದ್ದವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಓರ್ವರ ಮೃತದೇಹ ಪತ್ತೆಯಾಗಿದ್ದು, ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿರಬೇಕೆಂದು ಶಂಕಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಶಾಲೆಗಳಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ.ಗುರುವಾರದಿಂದಲೇ ಜೋಡುಪಾಲದ ಮೇಲ್ಬದಿಯ ಈ ಗುಡ್ಡ ಜಾರತೊಡಗಿತ್ತು. ಅದಕ್ಕಾಗಿ ಅಲ್ಲಿರುವ ಮನೆಗಳವರನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಪೂರ್ವಾಹ್ನ ಗುಡ್ಡ ಸಂಪೂರ್ಣ ಜಾರಿ ಅಲ್ಲಿರುವ ೩ ಮನೆಗಳು ಕೆಳಗಡೆಗೆ ಹೋಗಿ ನಾಶವಾಯಿತು.

ರಸ್ತೆಯಿಡೀ ನೀರು ಹರಿದು ಬರುತ್ತಿದ್ದು, ಸುಮಾರು 3 ಕಿಲೋಮೀಟರ್‌ನಷ್ಟು ವಾಹನವಾಗಲಿ, ಜನರಾಗಲೀ ಹೋಗಲು ಸಾಧ್ಯವಿಲ್ಲದಂತಹ ವಾತಾರವಣ ನಿರ್ಮಾಣವಾಗಿತ್ತು. ಈಗಾಗಲೇ ಸುಮಾರು800 ಜನರನ್ನು ಸ್ಥಳಾಂತರ ಮಾಡು ಕಾರ್ಯ ನಡೆದಿದೆ. ಅಲ್ಲದೇ ಭೂ ಕುಸಿತಗೊಂಡಿರುವ2ನೇ ಮೆಣ್ಣಂಗೇರಿ ಪ್ರದೇಶದ ಗುಡ್ಡದಲ್ಲಿ ಇನ್ನು ಸುಮಾರು 80ರಿಂದ 100 ಜನರು ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ¸ಸಸಿಕಾಂತ್ ಸೆಂಥಿಲ್ ನಿರಾಶ್ರಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.ಈ ಪ್ರದೇಶ ಮಡಿಕೇರಿ ತಾಲೂಕು ವ್ಯಾಪ್ತಿಗೆ ಬರುವುದಾದರೂ ಈ ರಸ್ತೆಯಲ್ಲಿ ಈಗಾಗಲೇ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಯಾರೂ ಇಲ್ಲಿಗೆ ಬರುವ ಸಾಧ್ಯತೆ ಇರಲಿಲ್ಲ. ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಎಸ್. ಐ. ಮಂಜುನಾಥ್ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ದಳ ಕೂಡಾ ಸೈಳಕ್ಕೆ ಬಂತು. ಊರವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಅಪರಾಹ್ನ ವೇಳೆಗೆ ಬಸಪ್ಪ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇಲ್ಲಿಯ ಹಮೀದ್ ಎಂಬವರ ಇಬ್ಬರು ಮಕ್ಕಳು ಕೂಡಾ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ

Related posts

Leave a Reply