Header Ads
Breaking News

ಮಹಿಳಾ ವಿಭಾಗದ ಆಶ್ರಯದಲ್ಲಿ ನಾರಿ ಉತ್ಸವ : ಬಾಂಬೆ ಬಂಟ್ಸ್ ಅಸೋಸಿಯೇಶನ್‍ನಿಂದ ಕಾರ್ಯಕ್ರಮ

ನವಿ ಮುಂಬಯಿಯ ಜೊಯಿನ್ ನಗರದಲ್ಲಿರುವ ಬಂಟ್ಸ್ ಸೆಂಟರ್‍ನಲ್ಲಿ ಬಾಂಬೆ ಪಾಂಡ್ಸ್ ಅಸೋಸಿಯೇಶನ್‍ನ ಮಹಿಳಾ ವಿಭಾಗದ ವತಿಯಿಂದ ನಾರಿ ಉತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಅಸೋಸಿಯೇಷನ್ ಅಧ್ಯಕ್ಷ ಮುರಳಿ ಕೆ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಾಂಬೆ ಬನ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಮುರಳಿ ಕೆ ಶೆಟ್ಟಿ ಅವರು, ಪುರುಷರು ಜೀವನಪೂರ್ತಿ ಮನೆ ಕುಟುಂಬವನ್ನು ನೋಡುವುದರೊಂದಿಗೆ ಉದ್ಯೋಗ ವ್ಯವಹಾರವನ್ನು ನಿರ್ವಹಿಸುತ್ತಾನೆ ಆತನ ಯಶಸ್ವಿ ಹಿಂದೆ ಮಹಿಳೆಯು ಸದಾ ಸಹ ಭಾಗಿಯಾಗುತ್ತಾರೆ. ಈ ಬಾರಿಯ ಜವಾಬ್ದಾರಿಯನ್ನು ವಹಿಸಿರುವ ಮಹಿಳಾ ವಿಭಾಗದ ಲತಾ ಜಿ ಶೆಟ್ಟಿ ತಂಡ ಸಮುದಾಯದ ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ ನಾರಿ ಉತ್ಸವವನ್ನು ನಡೆಸಿದೆ ಇದು ಮಹಿಳೆಯರ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಆನಂತರ ಕೃಪಾ ಆಳ್ವಾ ಅವರು ಮಾತನಾಡಿ, ಪ್ರತೀ ದಿನವೂ ಮಹಿಳೆಯರ ದಿನವಾಗಿದೆ. ಹೋಳಿ ಹಬ್ಬವು ಮುಗಿದಿದ್ದರೂ ಇಲ್ಲಿನ ಮಹಿಳೆಯರ ವರ್ಣರಂಚಿತ ಉಡುಪುಗಳನ್ನು ನೋಡುವಾಗ ಬಂಟ್ಸ್ ಅಶೋಷಿಯೇಶನ್ ಇನ್ನು ಹೋಳಿ ಮುಗಿದಿಲ್ಲ. ಎನ್ನುವಂತೆ ಭಾಸವಾಗುತ್ತದೆ. ಚಿಟ್ಟೆಗೆ ತನ್ನ ಸುಂದರವಾದ ರೆಕ್ಕೆ ಕಾಣುದಿಲ್ಲ ಅಂತೆಯೇ ನಮ್ಮ ಮಹಿಳೆಯರು. ಎಲ್ಲಾ ಕ್ಷೇತ್ರದಲ್ಲಿ ಯಶಸ್ವಿಯಾದವರು ಅವರಿಗೆ ಯಶಸ್ವಿನ ಅರಿವು ಆಗುತ್ತಿಲ್ಲ ನಮ್ಮನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದರು.

ಆನಂತರ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷರಾದರಂಜನಿ ಸುಧಾಕರ್ ಹೆಗಡೆಯವರು ಮಾತನಾಡಿ, ನಾರಿ ಉತ್ಸವವು ಮಹಿಳೆಯರಿಗೆ ಒಂದು ಸಂಬ್ರಮದ ಕ್ಷಣ. ಕಾಲ ಬದಲಾದಂತೆ ಪುರುಷರಲ್ಲಿ ಬದಲಾವಣೆಯಾಗುತ್ತಿದೆ. ಮೊದಲು ಮಹಿಳೆಯರಿಗೆ ಅಷ್ಟು ಸ್ವತಂತ್ರ ಇರಲಿಲ್ಲ. ಈಗ ಮಹಿಳೆಯರಿಗೆ ಸ್ವತಂತ್ರ ಇದೆ ಎಂದು ಹೇಳಿದರು.

ಮುಂಬಯಿ ವಿಜಯ ನಗರದ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಶೋಭಾ ಶಂಕರ್ ಶೆಟ್ಟಿ ಮಾತನಾಡಿ, ನಾವಿಂದು ನಾರಿ ಉತ್ಸವವನ್ನು ಮಾಡುತ್ತಿದ್ದೇವೆ ಯಾಕೆಂದರೆ ನಾವು ನಮ್ಮ ಹೆಣ್ಣು ಮಕ್ಕಳನ್ನು ಅವರು ಹುಟ್ಟಿದಂದಿನಿಂದ ಬೆಲೆಬಾಳುವ ಆಸ್ತಿಯಾಗಿ ನೋಡುತ್ತಿದ್ದೇವೆ. ಇದೀಗ ಸಮಾಜದಲ್ಲಿ ಉತ್ತಮ ಪರಿವರ್ತನೆಯಾಗುದರೊಂದಿಗೆ ಹೆಣ್ಣು ಮಕ್ಕಳ ಮಹತ್ವವನ್ನು ಗುರುತಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಮಾಜಿ ಕಾರ್ಯ ಅಧ್ಯಕ್ಷರುಗಳಾದ ಹೇಮಾ ಶೆಟ್ಟಿ, ಹೀರಾ ಆರ್ ಶೆಟ್ಟಿ, ಹರುಷ ಶೆಟ್ಟಿ, ಶೈಲಜಾ ಶೆಟ್ಟಿ ಮತ್ತು ಸುಶೀಲಾ ಸಿ ಶೆಟ್ಟಿ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಮುಂಬೈ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರನ್ನು ಕ್ರಿಷ್ಣ ಮುರಳಿ ಶೆಟ್ಟಿ ಉಷಾ ಶೆಟ್ಟಿ ಶರಣ ಶೆಟ್ಟಿ ತೇಜಕ್ಷಿ ಶೆಟ್ಟಿ ಸಹನೆ ಶೆಟ್ಟಿ ಪರಿಚಯಿಸಿದರು ಅತಿಥಿಗಳನ್ನು ಗುಣವತಿ ಶೆಟ್ಟಿ ಲಲಿತ ಬಿ ಶೆಟ್ಟಿ ತೇಜಕ್ಷಿ ಶೆಟ್ಟಿ ಪರಿಚಯಿಸಿದರು. ಕೊನೆಯಲ್ಲಿ ತೇಜಕ್ಷಿ ಶೆಟ್ಟಿ ಸಭಾ ಕಾರ್ಯಕ್ರಮದ ಮೊದಲು ಮತ್ತು ನಂತರ ವಿವಿಧ ಸಮಾಜದ ಮಹಿಳೆಯರಿಂದ ನೃತ್ಯ ಕಾರ್ಯಕ್ರಮಗಳು ಕಿರುನಾಟಕ ಸಮಾಜಕ್ಕೆ ಸಂದೇಶ ನೀಡುವ ರೂಪಕಗಳು ಸಾದರ ಗೊಂಡವು. ಪಾಲ್ಗೊಂಡ ಎಲ್ಲರಿಗೂ ವಿಶೇಷ ಉಡುಗೊರೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ನ ಹಿರಿಯ ಸದಸ್ಯರು ಮಾಜಿ ಅಧ್ಯಕ್ಷರುಗಳು ಅಧ್ಯಕ್ಷರುಗಳು ವಿವಿಧ ಉಪ ಸಮಿತಿಯ ಪದಾಧಿಕಾರಿಗಳು ಪರಿಸರದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಂಜನಿ ಸುಧಾಕರ್ ಹೆಗಡೆ ಕರ್ನಾಟಕ ಸರಕಾರದ ಮಕ್ಕಳ ರಕ್ಷಣಾ ಇಲಾಖೆಯ ಮಾಜಿ ಕಾರ್ಯಾಧ್ಯಕ್ಷೆ ಡಾ ಕೃಪಾ ಅಮರ್ ಆಳ್ವ ಅಂದೇರಿ ವಿಜಯನಗರದ ಅಂಧೇರಿ ವಿಜಯನಗರದ ಲ್ಯಾನ್ಸ್ ಕ್ಲಬ್ ಆಫ್ ಮುಂಬೈ ಇದರ ಮಾಜಿ ಅಧ್ಯಕ್ಷೆ ಶೋಭಾ ಶಂಕರ್ ಶೆಟ್ಟಿ ಬನ್ಸ್ ಅಸೋಸಿಯೇಷನ್ನ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್ ಶೆಟ್ಟಿ ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ ಜೊತೆ ಕಾರ್ಯದರ್ಶಿ ಶಂಕರ ಶೆಟ್ಟಿ ಕೋಶಾಧಿಕಾರಿ ಶಾಮಸುಂದರ ಶೆಟ್ಟಿ ಯುವ ವಿಭಾಗದ ಕಾರ್ಯಧ್ಯಕ್ಷ ಶಶಿಕಾಂತ್ ರೈ, ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯ ಅಧ್ಯಕ್ಷೆ ಲತಾ ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *