Header Ads
Breaking News

ಮಹಿಷಾಸುರ ಪಾತ್ರಧಾರಿ ಕಂಬಕ್ಕೆ ತಲೆ ಹೊಡೆದುಕೊಂಡ ದೃಶ್ಯ ವೈರಲ್

ಕುಂದಾಪುರದ ಚಿತ್ತೂರಿನಲ್ಲಿ ಶ್ರೀ ದೇವಿ ಮಹಾತ್ಮ್ಯೆ ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದ ಕಂಬಕ್ಕೆ ತಲೆ ಹೊಡೆದುಕೊಂಡಿದ್ದು ಕಂಬ ಅದುರಿದ ಕಾರಣ ಕೆಲಕಾಲ ಆತಂಕದ ಸ್ಥಿತಿ ಉಂಟಾಯಿತು.

ಪೆರ್ಡೂರು ಮೇಳದ ಪ್ರದರ್ಶನಕ್ಕೆ ಮಾರಣಕಟ್ಟೆ ಮೇಳದ ಯುವ ಕಲಾವಿದ ನಂದೀಶ್ ಮೊಗವೀರ ಜನ್ನಾಡಿ ಅವರು ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಅವರ ಮಹಿಷಾಸುರ ವೇಷ ಪ್ರಸಿದ್ಧವಾಗಿದ್ದು ಅದಕ್ಕಾಗಿಯೇ ತೆರಳುವ ಅಭಿಮಾನಿ ಸಮೂಹವೂ ಇದೆ. ತೆಂಕಿನ ಮೇಳಗಳ ಮಹಿಷಾಸುರನನ್ನೇ ಹೋಲುವ ರೀತಿಯಲ್ಲಿ ಅವರು ಪಾತ್ರ ನಿರ್ವಹಣೆ ಮಾಡುತ್ತಿದ್ದು ಅದಕ್ಕಿಂತಲೂ ವಿಭಿನ್ನವಾಗಿ ರಂಗದಲ್ಲಿ ರೌದ್ರರಸದ ಪ್ರತಿಪಾದನೆ ಮಾಡುತ್ತಾರೆ. ದೊಂದಿ ಬೆಳಕಿನಲ್ಲಿ ರಾಳದ ಹುಡಿ ಹಾಕುತ್ತಾ ಅಬ್ಬರದ ಪ್ರವೇಶ ನೀಡುವುದಷ್ಟೇ ಅಲ್ಲ ದೇವಿಯ ಜತೆಗಿನ ಯುದ್ಧದ ಸಂದರ್ಭದಲ್ಲಿ ರಂಗಸ್ಥಳದ ಕಂಬಕ್ಕೆ ತಲೆಹೊಡೆದುಕೊಳ್ಳುವ ದೃಶ್ಯ ಇವರದ್ದು ಅನೇಕ ಸಮಯಗಳಿಂದ ಪ್ರಸಿದ್ಧ.
ಚಿತ್ತೂರಿನಲ್ಲಿ ನಡೆದ ಪ್ರದರ್ಶನ ಸಂದರ್ಭವೂ ದೇವಿಯ ಜತೆಗಿನ ಹೋರಾಟದ ಸನ್ನಿವೇಶದಲ್ಲಿ ಕಂಬಕ್ಕೆ ತಲೆ ಹೊಡೆದುಕೊಂಡರು. ಅಭಿಮಾನಿಗಳು ಶಿಳ್ಳು, ಚಪ್ಪಾಳೆಗಳ ಮೂಲಕ ಪ್ರತಿಕ್ರಿಯಿಸಿದರು. ಇದೇ ವೇಳೆ ಹೊಡೆತದ ಅಬ್ಬರಕ್ಕೆ ರಂಗಸ್ಥಳದ ಒಂದು ಬದಿಯ ಕಂಬಕ್ಕೆ ಅಳವಡಿಸಿದ್ದ ಹೂವಿನ ಅಲಂಕಾರ ಚೆಲ್ಲಾಪಿಲ್ಲಿಯಾಯಿತು. ಇನ್ನೊಂದು ಬದಿಯ ಕಂಬಕ್ಕೆ ಹೊಡೆದಾಗ ಅದು ಅಲುಗಾಡತೊಗಿತು. ರಂಗಸ್ಥಳದ ಕಂಬ ಹಾಗೂ ಅದಕ್ಕೆ ಜತೆಯಾಗಿ ಹಾಕಿದ್ದ ಮೇಲಿನ ಸಲಕರಣೆಗಳ ಅಡ್ಡದ ಕೊಂಡಿ ಸಡಿಲವಾಗತೊಡಗಿತು. ಇದನ್ನು ತತ್‍ಕ್ಷಣ ಗಮನಿಸಿದ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ರಂಗಸ್ಥಳ ಸಹಾಯಕರಿಗೆ ಸೂಚನೆ ನೀಡಿದರು. ಸರಿಪಡಿಸುವಂತೆ ಹೇಳಿದರು.

Related posts

Leave a Reply

Your email address will not be published. Required fields are marked *