

ಪುತ್ತೂರು: ಸಾಮೆತ್ತಡ್ಕ ನಿವಾಸಿ, ಪುತ್ತೂರು ಪುರಸಭೆಯ ಮಾಜಿ ಸದಸ್ಯರಾಗಿರುವ ಗೋಪಿನಾಥ್ ರಾವ್(64ವ.) ರವರು ಅಸೌಖ್ಯದಿಂದ ಜ.4 ರಂದು ಸ್ವಗೃಹದಲ್ಲಿ ನಿಧನರಾದರು.ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಗೋಪಿನಾಥ್ ರಾವ್ ರವರು ಪುರಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ದುಡಿದಿದ್ದಾರೆ. ಕಲ್ಲಾರೆ ರಾಘವೇಂದ್ರ ಮಠದಲ್ಲಿ ಜರಗುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿದ್ದರು. ಮೃತರು ಪತ್ನಿ ಅನಿತಾ ಗೋಪಿನಾಥ್ ರಾವ್, ಪುತ್ರಿಯರಾದ ಅಕ್ಷತಾ, ಅರ್ಪಿತಾ, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.