Header Ads
Breaking News

ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನ : ಶ್ರೀದೇವಿಯ 53ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವ

ವಿಟ್ಲ: ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದಲ್ಲಿ ಶ್ರೀದೇವಿಯ 53ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಲಾ ಕಾರ್ಯಕ್ರಮಗಳೊಂದಿಗೆ ಮಾ. 9ರಿಂದ ಮಾ. 11ರ ವರೆಗೆ ನಡೆಯಲಿದೆ.

9ರಂದು ಬೆಳಿಗ್ಗೆ ಸ್ಥಳಶುದ್ದಿ, ಗಣಪತಿ ಹೋಮ, ಶ್ರೀದೇವಿಯ ಕಲಶ ಪ್ರತಿಷ್ಠೆ, ಉದಯ ಪೂಜೆ, ವಿವಿಧ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 10ರಂದು ಬೆಳಿಗ್ಗೆ ತುಲಾಭಾರ ಸೇವೆ, ಶ್ರೀದೇವಿಯ ಮಹಾಪೂಜೆ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಅಲಂಕಾರ ಪೂಜೆ, ಹೂವಿನ ಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಕುಣಿತ ಭಜನೆ, ಮಣಿಯಂಪಾರೆ, ದೀಪಾರಾಧನೆ, ಭಜನೆ ನಡೆಯಲಿದೆ. ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಾರಾಯಣ ನಾರ್ಜಾಲ್ ಮತ್ತು ಬಳಗದವರಿಂದ ಅದ್ಧೂರಿ ಡ್ಯಾನ್ಸ್ ಕಾರ್ಯಕ್ರಮ, ನಾಗದೇವರ ಮಹಾಪೂಜೆ, ನಾಗದರ್ಶನ , ನಾಗತಂಬಿಲ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾರ್ಚ್ 11ರಂದು ದರ್ಶನ ಬಲಿ, ದೀಪಾರಾಧನೆ, ಭಜನೆ ಶ್ರೀ ದೇವಿಯ ಮಹಾಪೂಜೆ ಬಳಿಕ ನೃತ್ಯ ವೈವಿಧ್ಯ, ಯಕ್ಷಗಾನ ನಡೆಯಲಿದೆ. ಈಗಾಗಲೇ ಜಾತ್ರೋತ್ಸವಕ್ಕೆ ಭರದ ಸಿದ್ಧತೆ ನಡೆಸಲಾಗುತ್ತಿದೆ.

ಮುಂದಿನ ವರ್ಷ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇದರ ಪ್ರಯುಕ್ತ ವರ್ಷಪೂರ್ತಿ ಭಜನೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ಭಾನುವಾರ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *