Header Ads
Header Ads
Breaking News

ಮಾನಸಿಕ ಖಿನ್ನತೆಗೆ ಮಾನಸಿಕ ಅಸ್ವಸ್ಥತೆಗೆ ಕಾರಣ ದೌರ್ಬಲ್ಯ: ಡಾ.ಪಿ.ವಿ ಭಂಡಾರಿ ಹೇಳಿಕೆ

ಮಾನಸಿಕ ಖಿನ್ನತೆಗೆ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವ ಒಂದು ದೌರ್ಬಲ್ಯ. ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ವರದಿ ಅನ್ವಯ 14s ವರ್ಷದ ಒಳಗಿನ ಶೇ.50ರಷ್ಟು ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಡಾ.ಎ.ವಿ ಬಾಳಿಗಾ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ತಿಳಿಸಿದರು.ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಆಶ್ರಯದಲ್ಲಿ  ಕಮಲ್ ಬಾಳಿಗಾ ಸಭಾಭವನದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ‘ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನತೆ ಮತ್ತು ಮಾನಸಿಕ ಆರೋಗ್ಯ’ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬದಲಾದ ಆಧುನಿಕ ಜೀವನಶೈಲಿಯು ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತಿದ್ದು, ಇದು ಮಾನಸಿಕ ಖಿನ್ನತೆಗೆ ಕಾರಣವಾಗಿದೆ. ಇದರಿಂದಾಗಿ ಬಹುತೇಕರು ಖಿನ್ನತೆಯಿಂದಲೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಜನರು ಸಂಘ ಜೀವನ ದಿಂದ ದೂರಾಗಿ ಎಲೆಕ್ಟ್ರಾನಿಕ್ ಸಾಧನ ಗಳ ಕಡೆಗೆ ವಾಲುತ್ತಿದ್ದಾರೆ.

ಅವುಗಳ ಬಳಕೆಯ ಗೀಳಿನಲ್ಲಿ ಒಂಟಿ ಜೀವನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಕ್ರಮೇಣ ಅದು ಅವರನ್ನು ಖಿನ್ನತೆಗೆ ತಳ್ಳುತ್ತಿದೆ ಎಂದು ಹೇಳಿದರು.ಆತ್ಮಹತ್ಯೆಗೆ ಮುಖ್ಯವಾಗಿ ಖಿನ್ನತೆ ಮುಖ್ಯ ಕಾರಣವಾಗಿದ್ದು, ಆತ್ಮಸ್ಥೈರ್ಯದಿಂದ ಆತ್ಮಹತ್ಯೆ ತಡೆಗಟ್ಟಬಹುದಾಗಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಂಡವರು ಸಮಾಲೋಚನೆ ಮತ್ತು ಸೂಕ್ತ ಚಿಕಿತ್ಸೆಯಿಂದ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಅತಿಯಾದ ಶ್ರೀಮಂತಿಕೆ, ಬಡತನ, ಮೊಬೈಲ್ ಬಳಕೆ, ಸಮಾಜಿಕ ಜಾಲತಾಣದ ಬಳಕೆ ಮನುಷ್ಯನನ್ನು ಖಿನ್ನತೆಗೆ ನೂಕುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಸುಧಕರ್ ಶೆಟ್ಟಿ, ಶಂಕರಪುರದ ಅಧ್ಯಕ್ಷ ಚಂದ್ರ ಪೂಜಾರಿ, ಸಮಾಜ ಸೇವಕ ವಿಶು ಶೆಟ್ಟಿ ಹಾಗೂ ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಲಾಯಿತು.ಡಾ. ದೀಪಕ್ ಮಲ್ಯ ಅವರು ತೀವ್ರ ತರದ ಮಾನಸಿಕ ಕಾಯಿಲೆಗಳು ಮತ್ತು ಗುರುತಿಸುವಿಕೆ ಹಾಗೂ ಜೀವನ ಲೂಯಿಸ್ ಅಲ್ಪ ತರದ ಮಾನಸಿಕ ಕಾಯಿಲೆಗಳ ಕುರಿತು ವಿಷೇಶ ಉಪನ್ಯಾಸ ನೀಡಿದರು.ನಿವೃತ್ತ ಉಪಪ್ರಬಂಧಕ ಮೀನಾಕ್ಷಿ ಭಂಡಾರಿ ಉಪಸ್ಥಿತರಿದ್ದರು.

Related posts

Leave a Reply