Header Ads
Breaking News

ಮಾಸ್ಕ್ ಧರಿಸದವರಿಂದ ದಂಡ ವಸೂಲಿ : ಉಳ್ಳಾಲ ನಗರಸಭೆ ಕಮೀಷನರ್ ಕಾರ್ಯಾಚರಣೆ

ಉಳ್ಳಾಲ: ಬೀದಿಬದಿ ವ್ಯಾಪಾರಿಗಳು ಮಾಸ್ಕ್ ಹಾಕದೇ ಇರುವುದರ ವಿರುದ್ಧ ಜಾಗೃತಿ ಮೂಡಿಸಿದ ಉಳ್ಳಾಲ ನಗರಸಭೆ ಕಮೀಷನರ್ ರಾಯಪ್ಪ ಅವರು, ಹಲವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿದರು.

ಉಳ್ಳಾಲ, ತೊಕ್ಕೊಟ್ಟು, ತೊಕ್ಕೊಟ್ಟು ಒಳಪೇಟೆ, ಪಂಡಿತ್ ಹೌಸ್, ಜಂಕ್ಷನ್ ಸುತ್ತಾ ಸುತ್ತಾಡಿದ ಕಮೀಷನರ್ , ಮಾಸ್ಕ್ ಹಾಕದೇ ವ್ಯಾಪಾರ ನಡೆಸುವವರಿಂದ ದಂಡ ವಸೂಲಿ ನಡೆಸಿದರು. ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳಲಾಗುತ್ತಿದ್ದು, ಮೊದಲಿಗೆ ರೂ.1,000, ಎರಡನೇ ಬಾರಿಯೂ ಮಾಸ್ಕ್ ಹಾಕದೇ ಇದ್ದಲ್ಲಿ ರೂ.2,000, ಆದರೂ ಆದೇಶ ಪಾಲಿಸದೇ ಇದ್ದಲ್ಲಿ ಅಂಗಡಿಯನ್ನೇ ತೆರವುಗೊಳಿಸುವಂತೆ ಆದೇಶ ಇದೆ. ಅದನ್ನು ಯಥಾವತ್ ಆಗಿ ಪಾಲಿಸಲಾಗುವುದು ಎಂದು ಕಮೀಷನರ್ ರಾಯಪ್ಪ ಮಾಧ್ಯಮಕ್ಕೆ ತಿಳಿಸಿದರು. 10 ಗಂಟೆಗೆ ನಗರಸಭೆ ಕರ್ತವ್ಯಕ್ಕೆ ಹಾಜರಾಗುವವರಿದ್ದರೂ, ಬೆಳಿಗ್ಗೆ 8ಕ್ಕೆ ಹಾಜರಾಗಿ ಕಮೀಷನರ್ ಅವರು ಕೋವಿಡ್ ಕಾರ್ಯಾಚರಣೆಯಲ್ಲಿ ಒಬ್ಬಂಟಿಯಾಗಿ ತಿರುಗಿ ಕರ್ತವ್ಯ ನಿರ್ವಹಿಸುತ್ತಿರುವ ನಡೆ ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

Related posts

Leave a Reply

Your email address will not be published. Required fields are marked *