Header Ads
Header Ads
Breaking News

ಮಾಸ್ತಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್‌ಪುಸ್ತಕ ವಿತರಣೆ ಕಾರ್ಯಕ್ರಮ

ಮೂಡುಬಿದರೆಯ ಮಾಸ್ತಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉಚಿತ ನೋಟ್‌ಪುಸ್ತಕ ವಿತರಣೆ ಮತ್ತು ಶಾಲಾ ಮಂತ್ರಿ ಮಂಡಲವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಕೋಟ್ಯಾನ್ ಅವರು ಸರಕಾರ ತಪ್ಪು ಕೆಲಸ ಮಾಡಿದಾಗ ಅದನ್ನು ಸರಿ ದಾರಿಗೆ ತರುವಂತಹ ಜವಾಬ್ದಾರಿಯುತವಾದ ಕೆಲಸವನ್ನು ವಿರೋಧ ಪಕ್ಷದವರು ಮಾಡಬೇಕು.

ಸರಕಾರದಲ್ಲಿ ಎಲ್ಲವೂ ತಿಳಿದವರೇ ಇದ್ದರೆಂದು ತಿಳಿಯಬೇಡಿ. ಮಂತ್ರಿ ಮಂಡಲದಲ್ಲಿ ಯಾವ ಯಾವ ಜವಾಬ್ದಾರಿಗಳನ್ನು ನಿಭಾಯಿಸಬೇಕೆಂಬುದರ ಬಗ್ಗೆ ಶಿಕ್ಷಕರಿಂದ ತಿಳಿದುಕೊಂಡು ನೀವು ಕೆಲಸ ಮಾಡಬೇಕು. ಮತ್ತು ಇಂದು ಉಚಿತವಾಗಿ ನೀಡಿರುವ ಪುಸ್ತಕಗಳನ್ನು ಪಡೆದುಕೊಂಡು ಉತ್ತಮ ವಿದ್ಯೆಯನ್ನು ಪಡೆಯಿರಿ ಮುಂದೆ ನೀವು ಕೂಡಾ ದಾನಿಗಳಾಗಬೇಕು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಸೆಲ್ವಕುಮಾರ್, ಉಪಾಧ್ಯಕ್ಷೆ ಪ್ರಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *