Header Ads
Breaking News

ಮಾಹಿತಿ ಹಕ್ಕಿನ ಪ್ರಕಾರ ಕೇಳಿದಾಗ ಅಧಿಕಾರಿಗಳಿಂದ ನಿರ್ಲಕ್ಷ್ಯ ಈ ಬಗ್ಗೆ ಕಾನೂನು ಹೋರಾಟ : ಬಿ.ಕೆ ಸೇಸಪ್ಪ ಬೆದ್ರಕಾಡು ಹೇಳಿಕೆ

ವಿಟ್ಲ: ಮಾಹಿತಿ ಹಕ್ಕು ಅಧಿನಿಯಮ 2005ರ ಬಗ್ಗೆ ಕೇಳಲಾದ ಮಾಹಿತಿಗಳಿಗೆ ಜಿಲ್ಲೆಯ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.

ಅವರು ವಿಟ್ಲದ ಪ್ರೆಸ್ ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಜೀರು ಗ್ರಾಮದ ಬಳ್ಳೂರು ಲಚ್ಚಿಲ್ ಭೂತದ ವಾಲು ಎಂಬಲ್ಲಿಯ ರಸ್ತೆ ಅತಿಕ್ರಮಣವನ್ನು ತಹಶೀಲ್ದಾರ್ ಖುದ್ದಾಗಿ ತೆರವುಗೊಳಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದ್ದರೂ ತೆರವು ಮಾಡದೇ ಇರುವುದು ಮತ್ತು ತೆಗೆದುಕೊಂಡಿರುವ ಕ್ರಮದ ಬಗ್ಗೆ ಉತ್ತರಿಸದೇ ಇರುವ ಬಗ್ಗೆ ತಹಶೀಲ್ದಾರ್‍ರಲ್ಲಿ ಕೇಳಿದರೂ ಉತ್ತರ ಬಂದಿಲ್ಲ ಎಂದು ಹೇಳಿದ್ರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು, ತಾಲ್ಲೂಕು ಅಧ್ಯಕ್ಷ ಗಣೇಶ ಸೀಗೆಬಲ್ಲೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *