Header Ads
Breaking News

ಮಾ.11ರಂದು `ಸಂಪೂರ್ಣ ಶ್ರೀದೇವಿ ಮಹಾತ್ಮೆ’; ಭೂಮಿಯಲ್ಲಿ ನೀರು ಕರುಣಿಸಿದ ಕಟೀಲು ದೇವಿಗೆ ಸೇವಾ ಬಯಲಾಟ

ಪುತ್ತೂರು : ತಾನು ಖರೀದಿಸಿದ ಜಮೀನಿನಲ್ಲಿ ನೀರು ಸಿಕ್ಕರೆ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಬಯಲಾಟ ಸೇವೆ ಮಾಡುವುದಾಗಿ ಹರಕೆ ಹೊತ್ತುಕೊಂಡಿದ್ದ ಕುಟುಂಬವೊಂದು ಕೊಳವೆಬಾವಿಯಲ್ಲಿ ನೀರು ಲಭಿಸಿದ ಹಿನ್ನಲೆಯಲ್ಲಿ ಆ ಬಯಲಾಟ ಸೇವೆ ಸಂದಾಯ ಮಾಡಲು ಮುಂದಾಗಿದೆ. ಮಾ.11ರಂದು ರಾತ್ರಿ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಕೊಡಿನೀರು ಎಂಬಲ್ಲಿ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದಿಂದ `ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಎಂಬ ಸೇವಾ ಬಯಲಾಟ ನಡೆಯಲಿದೆ.

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟ್ರಮಣ ಗೌಡ ಕಳುವಾಜೆ ಅವರು, ಕೊಡಿನೀರಿನಲ್ಲಿ ನಾವು ಖರೀದಿಸಿದ ಜಾಗದಲ್ಲಿ ನೀರು ಇರಲಿಲ್ಲ. ಈ ಹಿಂದೆ ಆ ಜಾಗದಲ್ಲಿ ಸುಮಾರು 32 ಕೊಳವೆಬಾವಿಗಳನ್ನು ಕೊರೆಯಲಾಗಿದ್ದರೂ ನೀರು ಲಭಿಸಿರಲಿಲ್ಲ. ನೀರು ಲಭಿಸಿದರೆ ಬಯಲಾಟ ಸೇವೆಯ ಹರಕೆ ಹೊತ್ತಿದ್ದೆವು. ಬಳಿಕ ತೆಗೆದ ಕೊಳವೆಬಾವಿಯಲ್ಲಿ 2 ಇಂಚಿಯಷ್ಟು ನೀರು ಲಭಿಸಿದೆ ಎಂದರು.

ಸೇವಾ ಬಯಲಾಟ ಪ್ರಯುಕ್ತ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ರಾತ್ರಿ 7 ಗಂಟೆಗೆ ನಡೆಯುವುದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನಾ.ಸೀತಾರಾಮ ಅವರು ಉದ್ಘಾಟಿಸುವರು. ಶಾಸಕ ಸಂಜೀವ ಮಠಂದೂರು ಅವರು ಅಧ್ಯಕ್ಷತೆ ವಹಿಸುವರು. ಸಮಾಜ ಸೇವಕಿ ನಳಿನಿ ಲೋಕಪ್ಪ ಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀಧರ ಭಂಡಾರಿ, ಯಕ್ಷಗಾನ ಭಾಗವತರಾದ ಭವ್ಯಶ್ರೀ ಹರೀಶ್ ಕುಲ್ಕುಂದ ಮತ್ತು ವೀರಮಂಗಲದ ಶ್ರೀಕೃಷ್ಣ ಕಲಾಕೇಂದ್ರದ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಗುವುದು ಎಂದರು.

ಈ ಸಂದರ್ಭ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಹಿಂದೂ ಸಂಘಟನೆಯ ಮುಖಂಡ ಅರುಣ್‍ಕುಮಾರ್ ಪುತ್ತಿಲ, ಪ್ರಗತಿಪರ ಕೃಷಿಕ ಸುಕುಮಾರ್ ಜೈನ್ ಕೈಪಂಗಳಗುತ್ತು, ಮುಂಡೂರು ಮೃತ್ಯುಂಜಯೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ನರಿಮೊಗ್ರು ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ತಾಪಂ ಸದಸ್ಯ ಪರಮೇಶ್ವರ ಭಂಡಾರಿ, ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಎಚ್.ಡಿ.ಶಿವರಾಮ್,ಬನ್ನೂರು ಅಲುಂಬುಡ ಸೇವಾ ಟ್ರಸ್ಟ್ ಅಧ್ಯಕ್ಷ ಬೊಮ್ಮಣ್ಣ ಗೌಡ ಮುಕ್ರಂಪಾಡಿ ಅವರು ಅತಿಥಿಗಳಾಗಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ದೇವಿಯ ಮಹಾಪೂಜೆ, ಅನ್ನಸಂತರ್ಪಣೆ ನಡೆಯುವುದು ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಎ.ವಿ.ನಾರಾಯಣ, ಪ್ರತಿಭಾ ಎ.ವಿ, ಕೊಡಿನೀರು ಅಶ್ವತ್ಥ ಕಟ್ಟೆ ಸಮಿತಿಯ ಉಪಾಧ್ಯಕ್ಷ ನಾಗರಾಜ್ ದೋಳ, ಬಾಳಪ್ಪ ಗೌಡ ಕೆದ್ಕಾರ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *