Header Ads
Breaking News

ಮಿಥುನ್ ರೈ ಬಗ್ಗೆ ಗುತ್ತಿಗಾರಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದೇನು ಗೊತ್ತೇ?

ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಮತದಾನ ಸಂದರ್ಭದಲ್ಲಿ ವೋಟರ್ ಸ್ಲಿಪ್‌ನ್ನು ಗುರುತಿನ ಚೀಟಿಯಾಗಿ ಪರಿಗಣಿಸಲಾಗುವುದಿಲ್ಲ. ಹಾಗಾಗಿ ವೋಟರ್ ಸ್ಲಿಪ್ ಜೊತೆಗೆ ಎಪಿಕ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ತರಬೇಕು ಅಂತಾ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಇವೆರಡೂ ಇಲ್ಲದೇ ಇದ್ದರೆ ಚುನಾವಣಾ ಆಯೋಗ ನಿಗದಿಪಡಿಸಿದ, ತಮ್ಮ ಭಾವಚಿತ್ರವುಳ್ಳ 11 ದಾಖಲೆಗಳನ್ನು ತರಬಹುದು. ಕೇವಲ ವೋಟರ್ ಸ್ಲಿಪ್ ಮಾತ್ರ ತಂದಲ್ಲಿ ಮತದಾನಕ್ಕೆ ಅವಕಾಶವಿರುವುದಿಲ್ಲ. ಇನ್ನು ಪಾಸ್‌ಪೋರ್ಟ್,  ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ಕಚೇರಿಗಳಿಂದ ಕೊಟ್ಟಿರುವ ಸರ್ವೀಸ್ ಐಡೆಂಟಿಟಿ ಕಾರ್ಡ್, ಪಾನ್  ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್‌ಗಳ, ತಮ್ಮ ಭಾವಚಿತ್ರವುಳ್ಳ ಪಾಸ್‌ಬುಕ್ , ಉದ್ಯೋಗ ಖಾತರಿ ಯೋಜನೆಯ ಜಾಬ್‌ಕಾರ್ಡ್, ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಪಿಂಚಣಿ ಯೋಜನೆಯ ಗುರುತಿನ ಚೀಟಿಯುಳ್ಳ ದಾಖಲೆಗಳು, ಎಂಪಿ ಹಾಗೂ ಎಂಎಲ್‌ಎ, ಪ್ರತಿನಿಧಿಗಳಿಗೆ ಕೊಟ್ಟಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಎಪಿಕ್ ಕಾರ್ಡ್ ಇದರಲ್ಲಿ ಯಾವುದೇ ಗುರುತಿನ ಚೀಟಿ ತಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದ್ರು… 

Related posts

Leave a Reply

Your email address will not be published. Required fields are marked *