Header Ads
Breaking News

ಮಿಮಿಕ್ರಿಯಲ್ಲಿ ಹಳ್ಳಿಹುಡುಗ ರಾಜ್ಯಕ್ಕೆ ಪ್ರಥಮ : ಕೊಕ್ಕಡ ಸರಕಾರಿ ಶಾಲೆಯ ವಿದ್ಯಾರ್ಥಿ ವಿಶಾಖ್

ಕೊಕ್ಕಡ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಹಳ್ಳಿಹುಡುಗ ವಿಶಾಖ್ ಕುಮಾರ್ ರಾಜ್ಯ ಮಟ್ಟದ ಮಿಮಿಕ್ರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಸರಕಾರಿ ಶಾಲೆಯೂ ಕೂಡಾ ವಿದ್ಯಾರ್ಥಿಗಳ ಪ್ರತಿಭೆಗಳ ಬೆಳವಣಿಗೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ ಎಂಬುವುದಕ್ಕೆ ಒಂದು ಉತ್ತಮ ನಿದರ್ಶನ.

ಇತ್ತೀಚೆಗೆ ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2019-20 ರಲ್ಲಿ ಕೊಕ್ಕಡ ಸರಕಾರಿ ಫ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ವಿಶಾಖ್ ಕುಮಾರ್ ಮಿಮಿಕ್ರಿ ಸ್ಪಧೆರ್ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸರಕಾರಿ ಶಾಲೆಯಲ್ಲಿ ಕೂಡಾ ಉತ್ತಮ ಪ್ರತಿಭೆಗಳಿಗೆಅವಕಾಶವಿದೆ ಅನ್ನುವುದನ್ನು ನಿರೂಪಿಸಿದ್ದಾನೆ.
ಹಳ್ಳಿಯ ಪ್ರತಿಭೆ ವಿಶಾಖ್ ಕುಮಾರ್ ತನ್ನ ಮನೆಯವರಹಾಗೂ ಶಾಲಾ ಅಧ್ಯಾಪಕರುಗಳ ಪ್ರೋತ್ಸಾಹದಿಂದ ವಲಯ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ಪಧೆರ್Éಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆಯುವಲ್ಲಿ ಸಫಲನಾಗಿದ್ದೇನೆ ಎಂದು ಹೇಳುತ್ತಾನೆ.

ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಹಳ್ಳಿಂಗೇರಿಯ ಸಂತೋಶ್ ಕುಮಾರ್ ಹಾಗೂ ಗೀತಾಲಕ್ಷ್ಮಿ ದಂಪತಿಗಳ ಪುತ್ರ ವಿಶಾಖ್ ಕುಮಾರ್ ವಲಯ ಮಟ್ಟದಲ್ಲಿ ಗೆಲ್ಲುವ ಮೂಲಕ ಪ್ರಾರಂಭವಾದ ಪ್ರಶಸ್ತಿಯ ಓಟ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಪ್ರಥಮ, ಬಂಟ್ವಾಳದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಬಳಿಕ ಇದೀಗ ರಾಜ್ಯಮಟ್ಟದಲ್ಲಿಯೂ ಮಿಮಿಕ್ರಿ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಗೆಲ್ಲುವ ಮೂಲಕ ತಾನು ಕಲಿತ ಸರಕಾರಿ ಫ್ರೌಢಶಾಲೆಗೆ ಹಾಗೂ ಕೊಕ್ಕಡ ಗ್ರಾಮಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದಾನೆ. ಕೊಕ್ಕಡದ ಸರಕಾರಿ ಶಾಲೆಯಿಂದಲೇ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದ ವಿಶಾಖ್ ಕುಮಾರ್ ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿಯೂ ಹೆಸರು ಗಳಿಸಲಿ ಅನ್ನುವುದು ಕೊಕ್ಕಡ ಸರಕಾರಿ ಶಾಲೆಯ ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಹಾರೈಕೆಯಾಗಿದೆ.

Related posts

Leave a Reply

Your email address will not be published. Required fields are marked *