Header Ads
Breaking News

ಮಿಸ್ಬಾಹ್ ಕಾಲೇಜು ವತಿಯಿಂದ ಈದ್-ಮಿಲಾದ್

ಕಾಟಿಪಳ್ಳ ಮಿಸ್ಬಾಹ್ ಮಹಿಳಾ ಕಾಲೇಜಿನ ವತಿಯಿಂದ ವರ್ಷಂ ಪ್ರತಿ ಆಚರಿಸುತ್ತಿರುವ ಪ್ರವಾದಿ (ಸ.ಅ) ಜನ್ಮ ದಿನದ ಪ್ರಯುಕ್ತ ಈದ್ ಮಿಲಾದ್ ಕಾರ್ಯಕ್ರಮವು ಶನಿವಾರದಂದು ಮಿಸ್ಬಾಹ್ ಸಭಾಂಗಣದಲ್ಲಿ ನಡೆಯಿತು. ಕೃಷ್ಣಾಪುರ ಜಮಾಹ ತಿನ ಸಂಯುಕ್ತ ಖಾಝಿಯವರಾದ ಮೌಲನಾ ಇ.ಕೆ ಇಬ್ರಾಹಿಂ ಮುಸ್ಲಿಯಾರ್‌ರವರು ದುಆ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಅಲ್ಹಾಜ್ ಬಿ.ಎಂ ಮಮ್ತಾಝ್ ಅಲಿಯವರು ಅಧ್ಯಕ್ಷತೆ ವಹಿಸಿದರು.ಮಂಗಳೂರು ಪಂಪ್ವೆಲ್ ಮಸ್ಜಿದು ತಖ್ವಾ ಮುಹಝ್ಝಿನ್‌ರಾದ ಇಬ್ರಾಹೀಂ ಗಂಗಾವಳಿರವರ ತಂಡದ ವತಿಯಿಂದ ಆಕರ್ಷಕವಾದಂತಹ ನಾತೆ ಶರೀಫ್ ಮತ್ತು ಮೌಲಿದ್ ಮಜ್ಲೀಸ್ ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್‍ಯದರ್ಶಿಯವರಾದ ಡಾ! ಅಬ್ದುಲ್ ರಶೀದ್ ಝೈನಿ ಮುಖ್ಯ ಪ್ರಭಾಷಣ ಮಾಡಿದರು. ಕಾರ್‍ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿಯು ಹಾಗೂ ಮಾಜಿ ಶಾಸಕರಾದ ಡಾ!ಬಿ.ಎ ಮೊಹಿದ್ದೀನ್ ಬಾವ, ಉಪಾಧ್ಯಕ್ಷರಾದ ಕೆ.ಮೊಹಮ್ಮದ್ ಹಾರೀಸ್, ಟಿ.ಎಚ್ ಮೆಹೆಬೂಬ್ ಅಲ್-ಜುಬೈಲ್, ಸಂಚಾಲಕರಾದ ಬಿ.ಎ ನಝೀರ್, ಹಕೀಂ ಪಾಲ್ಕನ್ ಹಾಗೂ ಬಾವ ಫಕ್ರುದ್ದೀನ್ ಉಪಸ್ಥಿತರಿದ್ದರು. ಮಹಿಳಾ ಶರೀಹತ್ ಕಾಲೇಜಿನ ಉಪನ್ಯಾಸಕರಾದ , ಫಾರೂಕ್ ಸಖಾಫಿ ಹಾಗೂ ಅಶ್ರಪ್ ಸಖಾಪಿ ಭಾಗವಹಿಸಿದ್ದರು.ಕಾರ್‍ಯಕ್ರಮದಲ್ಲಿ ಮಹಿಳಾ ಕಾಲೇಜು ಹಾಗೂ ಶರೀಹತ್ ಕಾಲೇಜಿನ ವಿದ್ಯಾರ್ಥಿನಿಯರು, ಶಿಕ್ಷಕಿಯರು, ಝೀಕ್ಯೂ ನರ್ಸರಿ ಸ್ಕೋಲ್‌ನ ಶಿಕ್ಷಕಿಯರು ಮತ್ತು ಪ್ರಾಂಶುಪಾಲರಾದ ಝಾಯಿದಾ ಜಲೀಲ್ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಶರೀಹತ್‌ನ ಪ್ರಾಂಶುಪಾಲರಾದ ಹಬೀಬು ರಹ್ಮಾನ್ ಸಖಾಫಿ ಧನ್ಯವಾದ ಸಮರ್ಪಿಸಿದರು.

Related posts

Leave a Reply

Your email address will not be published. Required fields are marked *