Header Ads
Breaking News

ಮೀಯಪದವು ಅಧ್ಯಾಪಕಿಯ ನಿಗೂಢ ಸಾವು : ಜನಪರ ವೇದಿಕೆಯಿಂದ ಪ್ರತಿಭಟನೆ

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಶಾಲೆಯ ಅಧ್ಯಾಪಕಿ, ಚಿಗುರುಪಾದೆ ನಿವಾಸಿ ರೂಪಶ್ರೀ ಬಿ.ಕೆ.(40) ಅವರ ನಿಗೂಢ ಸಾವಿನ ಬಗ್ಗೆ ತನಿಖೆಯನ್ನು ಜಿಲ್ಲಾ ಕ್ರೈಂಬ್ರಾಂಚ್‍ಗೆ ವಹಿಸಿಕೊಡಲಾಗಿದೆ.

ಡಿವೈಎಸ್‍ಪಿ ಎ.ಸತೀಶ್ ಕುಮಾರ್, ಮಂಜೇಶ್ವರ ಅಡಿಶನಲ್ ಎಸ್.ಐ.ಬಾಲಚಂದ್ರನ್ ನೇತೃತ್ವದಲ್ಲಿರುವ ಪ್ರತ್ಯೇಕ ತಂಡ ತನಿಖೆ ಆರಂಭಿಸಿದೆ.  ಪೊಲೀಸ್  ವರಿಷ್ಠಾಧಿಕಾರಿಯ ನಿರ್ದೇಶನದಂತೆ ತನಿಖೆಯನ್ನು ಹಸ್ತಾಂತರಿಸಲಾಗಿದೆ. ಮೀಯಪದವು ವಿದ್ಯಾವರ್ಧಕ ಶಾಲೆಯ ಅಧ್ಯಾಪಕಿ ರೂಪಶ್ರೀ ಬಿ.ಕೆ. ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮೀಯಪದವಿನಲ್ಲಿ ಜನಪರ ವೇದಿಕೆಯ ವತಿಯಿಂದ ಮೆರವಣಿಗೆ ನಡೆಯಿತು. ಸರ್ವಪಕ್ಷಗಳ ಜನಪರ ವೇದಿಕೆಯ ನೇತೃತ್ವದಲ್ಲಿ ಮೀಯಪದವು ಚರ್ಚ್ ಬಳಿಯಿಂದ ಆರಂಭಗೊಂಡ ಮೆರವಣಿಗೆ ಶಾಲಾ ಆವರಣದಲ್ಲಿ ಸಮಾಪ್ತಿಗೊಂಡಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಕೂಡಾ ಜೊತೆಯಾದರು. ಪ್ರತಿಭಟನೆಯ ತೀವೃತೆ ಹೆಚ್ಚಾಗುತಿದ್ದಂತೆ ಪ್ರತಿಭಟನಾ ನಿರತರನ್ನು ಹತೋಟಿಗೆ ತರಲು ಪೆÇಲೀಸರು ಹರಸಾಹಸ ಪಡಬೇಕಾಗಿಬಂತು.

ಡಿವೈಎಸ್‍ಪಿ ಅವರ ನೇತೃತ್ವದಲ್ಲಿ ಚಿಗುರುಪಾದೆಗೆ ತಲುಪಿದ ತನಿಖಾ ತಂಡ ರೂಪಶ್ರೀ ಅವರ ಮನೆಯಲ್ಲಿ ತಪಾಸಣೆ ಮಾಡಿದಾಗ ನಾಪತ್ತೆಯಾಗಿದ್ದ ಮೊಬೈಲ್  ಪೊನ್‍ಗಳಲ್ಲಿ ಒಂದನ್ನು ಪತ್ತೆಹಚ್ಚಲಾಗಿದೆ. ಕಿಟಕಿಯ ಬದಿಯಲ್ಲಿ ಈ ಪೊನ್‍ ಕಂಡು ಬಂದಿದೆ. ಬ್ಯಾಟರಿ ಕಡಿಮೆಯಾಗಿರುವುದರಿಂದ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿ ಪೊನ್‍  ಪತ್ತೆಯಾಗಿದೆ. ಇದನ್ನು ಆನ್ ಮಾಡಿದ ಬಳಿಕ ತಪಾಸಣೆ ನಡೆಸಲು ತನಿಖಾ ತಂಡ ತೀರ್ಮಾನಿಸಿದೆ.

Related posts

Leave a Reply

Your email address will not be published. Required fields are marked *