Header Ads
Breaking News

ಮೀಯಪದವು ಶಿಕ್ಷಕಿಯ ಸಂಶಯಾಸ್ಪದ ಸಾವು ಪ್ರಕರಣ : ತನಿಖೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ

ಮಂಜೇಶ್ವರ: ಮೀಯಪದವು ಶಾಲೆ ಅಧ್ಯಾಪಿಕೆ ಚಿಗುರುಪಾದೆ ನಿವಾಸಿ ರೂಪಶ್ರೀ ಬಿ ಕೆ ನಿಗೂಢ ಸಾವಿನ ಶಂಕೆಗಳು ಹೊಸ ತಿರುವನ್ನು ಪಡೆಯುತ್ತಿದೆ. ಅಧ್ಯಾಪಿಕೆಯ ಸಾವು ಕೊಲೆಯಾಗಿದೆಂದು ಆರೋಪಿಸಿ ಮೀಂಜ ಪಂ. ಕುಟುಂಬ ಶ್ರೀಯ ವತಿಯಿಂದ ಚಿಗುರುಪಾದೆಯಿಂದ ಮೀಯಪದವು ತನಕ ಪ್ರತಿಭಟನಾ ಮೆರವಣಿಗೆ ನಡೆದು ಬಳಿಕ ವಿದ್ಯಾವರ್ಧಕ ಶಾಲಾ ಮುಂಬಾಗದಲ್ಲಿ ಧರಣಿ ನಡೆಸಿ ತನಿಖಾಧಿಕಾರಿಗಳು ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಳಿಕ ವಿದ್ಯಾವರ್ಧಕ ಶಾಲಾ ಮುಂಬಗದಲ್ಲಿ ನಡೆದ ಧರಣಿಯನ್ನು ಲತಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾವಿನಲ್ಲಿರುವ ನಿಗೂಢತೆಯನ್ನು ಬಹಿರಂಗಗೊಳಿಸಬೇಕು, ಸತ್ಯಾನ್ವೇಷಣೆ ನಡೆಸಬೇಕು ಮೊದಲಾದ ಬೇಡಿಕೆಯೊಂದಿಗೆ ಧರಣಿ ನಡೆಸಲಾಗಿದೆ. ಜನಪ್ರತಿನಿಧಿಗಳಾದ ಮಮತಾ ದಿವಾಕರ್, ಶೋಭಾ, ಕುಂದರಿ ಶೆಟ್ಟಿ ಮೊದಲಾದವರು ಜಾಥಾಕ್ಕೆ ಮುಂದಾಳತ್ವ ನೀಡಿದ್ದರು

ಮರಣೋತ್ತರ ಪರೀಕ್ಷಾ ವರದಿಯಲ್ಲಿ ನಿಗೂಢತೆ ಎದ್ದು ಕಾಣುವುದಿಲ್ಲವಾದರೂ ಸಂಬಂಧಿಕರ ಹೇಳಿಕೆಯಲ್ಲಿ ಇದೊಂದು ವ್ಯವಸ್ಥಿತ ರೀತಿಯ ಕೊಲೆಯಾಗಿರುವ ಎಲ್ಲಾ ಲಕ್ಷಣಗಳು ಎದ್ದು ತೋರುತ್ತಿವೆ. ಪೊಲೀಸರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲವಾದರೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Related posts

Leave a Reply

Your email address will not be published. Required fields are marked *