
ಮೀಸಲಾತಿಯಲ್ಲಿ ಸರಕಾರ ಭಾರೀ ಹಸ್ತಕ್ಷೇಪ ನಡೆಸುತ್ತಿದೆ. ಗ್ರಾ.ಪಂ. ಚುನಾವಣೆಯಲ್ಲಿ ಹಸ್ತಕ್ಷೇಪ ನಡೆದಿದ್ದು ನಾವು ನೋಡಿಲ್ಲ. ಕಾಂಗ್ರೆಸ್ ಪಂಚಾಯತ್ ಮೀಸಲಾತಿಯಲ್ಲಿ ಹಸ್ತಕ್ಷೇಪ ನಡೆಸಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಮಂಗಳೂರಿನ ಕಾಂಗ್ರೆಸ್ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಪಂಚಾಯತ್ ತಿದ್ದುಪಡಿಗೆ ಅಂದು ಬಿಜೆಪಿ ವಿರೋಧಿಸಿತ್ತು. ರಾಜೀವ್ ಗಾಂಧಿ ಕಾಲದ ತಿದ್ದುಪಡಿಯಿಂದ ಗ್ರಾಮದ ಅಭಿವೃದ್ಧಿಯಾಗಿದೆ. ಕಳೆದ ಮೂರು ವರುಷಗಳಿಂದ ಬಡವರಿಗೆ ಮನೆ ಸಿಕ್ಕಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚುವರಿ ಮನೆಗಳು ಬಂದಿದ್ದವು. ಬಿಜೆಪಿ ಅಸ್ತಿತ್ವ ಬಂದ ನಂತರ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಅವಧಿಯಲ್ಲಿ ಕೊಟ್ಟಿರೋ ಬಿಪಿಎಲ್ ಕಾರ್ಡ್ ರದ್ದು ಮಾಡಿರಲಿಲ್ಲ. ಆದರೆ ಬಿಜೆಪಿ ಬಿಪಿಎಲ್ ರದ್ದು ಪಡಿಸಿ ದಂಡ ವಸೂಲಿ ಮಾಡುತ್ತಿದೆ. ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಇನ್ನೂ ಪರಿಹಾರ ಬಂದಿಲ್ಲ. ಇಂಧನ ಬೆಲೆ ಸ್ಥಳೀಯ ದೇಶಗಳಿಗಿಂತ ಭಾರತದಲ್ಲಿ ಅಧಿಕವಿದೆ. ದೇಶದಲ್ಲಿರುವುದು ಇದೊಂದು ದರಿದ್ರ ಸರಕಾರವಾಗಿದೆ ಎಂದು ಹೇಳಿದರು.