Header Ads
Header Ads
Header Ads
Breaking News

ಮೀಸಲಾತಿ ವರ್ಗಾವಣೆ ಕಾನೂನು ಪ್ರಕಾರ ಆಗಲಿ : ಪ್ರದೀಪ್ ಕುಮಾರ್ ಕೆ.ಎಲ್ ಹೇಳಿಕೆ

ದೇಶದಲ್ಲಿ ಪ್ರಸ್ತುತ ಇರುವ ಮೀಸಲಾತಿಯನ್ನು ಮುಂದಿನ 10 ವರ್ಷದವರೆಗೆ ಮುಂದುವರಿಸಿದ ಕೇಂದ್ರ ಸರಕಾರದ ಕ್ರಮ ಸರಿಯಲ್ಲ ಕಾನೂನು ಪ್ರಕಾರ ಮೀಸಲಾತಿಯ ವರ್ಗಾವಣೆ ಆಗಲೇಬೇಕು ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ಮೀಸಲಾತಿ ಮುಕ್ತಿ ಸಮಿತಿಯ ಸಂಚಾಲಕ ಪ್ರದೀಪ್ ಕುಮಾರ್ ಕೆ.ಎಲ್ ತಿಳಿಸಿದ್ದಾರೆ.

ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ 2020-21ರಲ್ಲಿ ಕಳೆದ 20 ವರ್ಷದ ಚುನಾವಣಾ ಕಮಿಟಿಯ ತೀರ್ಮಾನದಂತೆ ಕೊನೆಗೊಳ್ಳಬೇಕಾದ ಮೀಸಲಾತಿ ಕ್ಷೇತ್ರವು ಕೇಂದ್ರ ಸರಕಾರದ ರಾತ್ರೋರಾತ್ರಿಯ ನಿರ್ಧಾರದಿಂದ ಕ್ಯಾಬಿನೆಟ್‍ನಲ್ಲಿ ಇನ್ನೂ ಹತ್ತು ವರ್ಷಕ್ಕೆ ಈಗ ಇರುವ ಮೀಸಲಾತಿಯನ್ನೇ ಮುಂದುವರಿಸಿರುವುದು ಈ ದೇಶದ ಪ್ರಜಾಪ್ರಭುತ್ವದ ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಂಗ ಹಾಗೂ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಆಗಿದೆ. ಅಲ್ಲದೇ ಇನ್ನೊಂದು ಪ್ರದೇಶದ ಎಸ್‍ಸಿ ಮತ್ತು ಎಸ್‍ಟಿಗಳ ಹಕ್ಕು ಕರ್ತವ್ಯಗಳಿಗೆ ವಿರುದ್ದವಾದ ನಡವಳಿಗೆ ಆಗಿದೆ. ಆದ್ದರಿಂದ ಕೇಂದ್ರ ಸರಕಾರ ಸಂವಿಧಾನ ಬಾಹಿರದ ಏಕ ನಡೆಯನ್ನು ಸಮಿತಿಯು ಖಂಡಿಸುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಶೋಕ್ ಎಡಮಲೆ, ಪ್ರವೀಣ್ ಮುಂಡೋಡಿ, ಚೆನ್ನಕೇಶವ ನಾಯಕ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *