Header Ads
Header Ads
Breaking News

ಮುಂದಿನ ದಿನಗಳಲ್ಲಿ ಅಂಚೆ ಕಚೇರಿಯಲ್ಲಿಯೇ ವಿದ್ಯಾರ್ಥಿವೇತನ ಖಾತೆ : ಡಾ|ಚಾರ್ಲ್ಸ್ ಲೋಬೋ ಹೇಳಿಕೆ

 ಮುಂದಿನ ದಿನಗಳಲ್ಲಿ ವಿದ್ಯಾರ್ಥಿವೇತನಕ್ಕೆ ಅಂಚೆ ಕಛೇರಿಯಲ್ಲಿಯೇ ಖಾತೆ ಆರಂಭಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಕರ್ನಾಟಕ ವೃತ್ತದ ಚೀಫ್ ಫೋಸ್ಟ್ ಮಾಸ್ಟರ್ ಜನರಲ್ ಡಾ|ಚಾರ್ಲ್ಸ್ ಲೋಬೋ ಹೇಳಿದ್ರು. ಈ ಕುರಿತು ಮಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಅಂಚೆ ಇಲಾಖೆಗೆ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನವನ್ನು ಆರಂಭಿಸಲಾಗುತ್ತಿದೆ. ಈಗಾಗಲೇ ಸುಮಾರು 1063 ಪಿಡಿ ಖಾತೆಗಳನ್ನು ತೆರೆಯಲಾಗಿದ್ದು, ಬ್ಯೂರೊ ಸೇವೆಯನ್ನ ಕೂಡ ನೀಡಲಾಗುತ್ತಿದೆ. ಅಂಚೆ ಚೀಟಿ ಸಂಬಂಧಿತ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಫಿಲಾಟೆಲಿ ಬ್ಯೂರೋಗಳನ್ನು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಭಾರತೀಯ ಅಂಚೆ ಇಲಾಖೆ ಸ್ಥಾಪಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಒಟ್ಟು ನಾಲ್ಕು ಬ್ಯೂರೋಗಳಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಮಂಗಳೂರಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಮಂಗಳೂರಲ್ಲಿ ಅಕ್ಟೋಬರ್ 12ರಿಂದ 15ರತನಕ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.

Related posts

Leave a Reply

Your email address will not be published. Required fields are marked *