Header Ads
Header Ads
Breaking News

ಮುಂಬಯಿಯಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವಿಶೇಷ ಸಭೆ

 ಹಿಂದೂ ಧರ್ಮದಲ್ಲಿ ಯುಗಾದಿಯಿಂದ ಶಿವರಾತ್ರಿ ತನಕ ನಾನಾ ತರದ ಹಬ್ಬಗಳಿದ್ದು ಅದನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ರೋಗ ಪರಿಹಾರವಾರುತ್ತಿರುವ ಆಟಿ ತಿಂಗಳನ್ನು ಅಪವಾದ ಮಾಡುವುದು ಸರಿಯಲ್ಲ. ಆಟಿಯೆಂದರೆ ಅಪವಾದವಲ್ಲ ಆಟಿಯೆಂದರೆ ಆರಾಧನೆ. ಯವುದಕ್ಕೂ ಶುಭ ಮುಹೂರ್ತವಾಗಬೇಕಾಗಿದೆ. ಇಂದು ಆಮಂತ್ರಣ ಪತ್ರಿಕೆಯು ಶುಭ ಮುಹೂರ್ತದಲ್ಲಿ ಬಿಡುಗಡೆಯಾಗಿದೆ ಎಂದು ಕಾಂಜೂರು ಮಾರ್ಗ ಅಂಬಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವೇದಮೂರ್ತಿ ಪಿ. ಅನಂತ ಭಟ್ ನುಡಿದರು.

ಮುಂಬಯಿಯ ಉತ್ಕರ್ಷ ಶಾಲಾ ಸಭಾಗೃಹ, ದಪ್ತರಿ ರೋಡ್, ಮಲ್ಕನಿ ಎಸ್ಟೇಟ್ ಪುಷ್ಪಾ ಪಾರ್ಕ್, ಮಲಾಡ್ ಪೂರ್ವದಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ದಶಮಾನೋತ್ಸವ ಸಮಾರಂಭ ಹಾಗೂ 10ನೇ ವಾರ್ಷಿಕ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ನಡೆದ ವಿಶೇಷ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಈ ಸಮಿತಿಯು ವರಮಹಾಲಕ್ಷ್ಮಿ ಪೂಜೆಯನ್ನು ಕಳೆದ ಒಂಬತ್ತು ವರ್ಷಗಳಿಂದ ನಡೆಸುತ್ತಾ ಬಂದಿದ್ದು ಇದೀಗ ಹತ್ತನೆಯ ವರ್ಷದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದು ಇದು ಮಹಾಲಕ್ಷ್ಮಿಯ ಅನುಗ್ರಹದಿಂದ ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಲಾಡ್ ತತಾಸ್ತು ಪೌಂಡೇಶನ್‍ನ ಅಧ್ಯಕ್ಷರಾದ ಸತೀಶ್ ಭಟ್ ಅವರು ಮಾತನಾಡುತ್ತಾ ಪರಶುರಾಮ ಸೃಷ್ಟಿಯಲ್ಲಿ ಹುಟ್ಟಿದ ನಾವು ಕರ್ಮಭೂಮಿಯಾದ ಮಲಾಡ್ ನಗರದಲ್ಲಿ ವಿಜ್ರಂಭಣೆಯಿಂದ ನಡೆಯಲಿರುವ ಈ ಹತ್ತನೆ ಮಹಾ ವರ್ಷದ ಮಹಾಪೂಜೆಯು ವಿಜ್ರಂಭಣೆಯಿಂದ ಜರಗುದರೊಂದಿಗೆ ವರಮಹಾಲಕ್ಷ್ಮಿಯ ಎಲ್ಲಾ ಭಕ್ತರ ಮನೆಯಲ್ಲಿ ಸುಖ ಶಾಂತಿ ನೆಲೆಸಲಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಬೊಂಬೆ ಬಂಟ್ಸ್ ಅಸೋಷಿಯೇಶನಿನ ಜೊತೆ ಕೋಶಾಧಿಕಾರಿ ಶಾಮ್ ಸುಂದರ ಶೆಟ್ಟಿ ಯವರು ಸಮಾರಂಭಕ್ಕೆ ಶುಭ ಕೋರುತ್ತಾ ವಿವಿಧ ಸಮುದಾಯದವರು ಒಂದುಗೂಡಿ ಸಾಮೂಹಿಕ ವರಮಹಾಲಕ್ಷ್ಮಿಯ ಪೂಜೆ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮವನ್ನು ನಿರ್ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಿತಿಯ ಸಂಚಾಲಕ ಬಿ. ದಿನೇಶ್ ಕುಲಾಲ್ ಅವರು ಅಂದಿನ ಕಾರ್ಯಕ್ರಮದಲ್ಲಿ ಇಲ್ಲಿನ ಹೆಚ್ಚಿನ ತುಳು ಕನ್ನಡಿಗ ಪ್ರತಿಭೆಗಳ ಅನಾವರಣಗಳಾಗಲಿದ್ದು ಕಲಾಭಿಮಾನಿಗಳಿಗೆ ಹಾಗೂ ಭಕ್ತಾಭಿಮಾನಿಗಳಿಗೆ ಒಂದು ವಿಶೇಷ ಅನುಭವ ನೀಡಲಿರುವೆವು ಎಂದರು.

ದಶಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಪೂಜಾರಿ ಬ್ರಹ್ಮಾವರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ ಮಲಾಡ್ ಚಾಮುಂಡೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರಾದ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *